ಉದಯವಾಹಿನಿ, ನಂಜನಗೂಡು: ಬಹು ದಿನಗಳ ಬೇಡಿಕೆಯಾಗಿದ್ದ ನಗರ ಬಸ್ ನಿಲ್ದಾಣ ದಿಂದ ಹಂಡುವಿನಹಳ್ಳಿ ಬಡಾವಣೆಗೆ ಏSಖಖಿಅ ಬಸ್ ಸಂಚಾರಕ್ಕೆ ಬಹು ಬೇಡಿಕೆಯಾಗಿತ್ತು, ಜನರ ಬೇಡಿಕೆಯಂತೆ ಇಂದು ಕ್ಷೇತ್ರದ ಜನಪ್ರಿಯ ಯುವ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಹಂಡುವಿನಹಳ್ಳಿ ಬಡಾವಣೆಯಲ್ಲಿ ಬಸ್ ಸಂಚಾರಕ್ಕೆ ಇಂದುಚಾಲನೆ ನೀಡಿ, ಶುಭ ಹಾರೈಸಿದರು.

ಬಸ್ ಚಾಲನೆಗೆ ಹಸಿರು ಬಾವುಟ ತೋರಿಸುವ ಮೂಲಕ ಬಸ್ ಸಂಚಾರಕ್ಕೆ ಚಾಲನೆ ನೀಡಿದರು ಮುಂದುವರೆದ ಮಾತನಾಡಿ ಈ ಭಾಗದಲ್ಲಿ ನೂತನ ಬಡಾವಣೆಗಳು ಹೆಚ್ಚು ಹೆಚ್ಚು ಆಗುತ್ತಿವೆ ಜನಸಂಖ್ಯೆಯು ಕೂಡ ಹೆಚ್ಚಾಗಿದೆ ಇದರ ಜೊತೆಗೆ ವಿದ್ಯಾರ್ಥಿಗಳು ಕೂಡ ಶಾಲೆಗಳಿಗೆ ಕಾಲೇಜುಗಳಿಗೆ ಹೋಗಲು ಮತ್ತು ಕಾರ್ಖಾನೆಗಳಿಗೆ ತೆರಳುವ ಕಾರ್ಮಿಕರಿಗೂ ತೊಂದರೆಯಾಗಿತ್ತು ಇದಕ್ಕೆ ಸಂಬಂಧಪಟ್ಟಂತೆ ನನ್ನ ಗಮನಕ್ಕೆ ಬಡಾವಣೆಯ ನಿವಾಸಿಗಳು ತಂದಿದ್ದರು ಅದರಂತೆ ಇಂದು ಸದ್ಯಕ್ಕೆ ಒಂದು ಬಸ್ ಅನ್ನು ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಸಂಚರಿಸಲು ಚಾಲನೆ ನೀಡಿದ್ದೇನೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಬಸ್ಸಿನ ವ್ಯವಸ್ಥೆ ಬೇಕಾದಲ್ಲಿ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದರು ಇದೇ ಸಂದರ್ಭದಲ್ಲಿ ಹಲವಾರು ಮೂಲಭೂತ ಸೌಕರ್ಯದ ಬಗ್ಗೆ ಶಾಸಕರ ಗಮನಕ್ಕೆ ಅಲ್ಲಿನ ನಿವಾಸಿಗಳು ತಂದರು ಆದಷ್ಟು ಬೇಗ ಇದನ್ನೆಲ್ಲಾ ಬಗೆಹರಿಸುತ್ತೇನೆ ಎಂದು ಅಶ್ವಾಸನೆ ನೀಡಿದರು ಇದೇ ಸಂದರ್ಭದಲ್ಲಿ ಬಡಾವಣೆ ನಿವಾಸಿಗಳು ಮತ್ತು ಯುವಕರು ಶಾಸಕರಿಗೆ ಸನ್ಮಾನಿಸಿದರು.

ಬಡಾವಣೆ ನಿವಾಸಿಗಳು ಬಸ್ಸಿನಲ್ಲಿ ಪ್ರಯಾಣ ಮಾಡಿ ಖುಷಿ ಪಟ್ಟರು. ಈ ಸಂದರ್ಭದಲ್ಲಿ ನಗರಸಭಾ ಆಯುಕ್ತರು ನಂಜುಂಡ ಸ್ವಾಮಿ, ಪುಷ್ಪ ಬ್ಲಾಕ್ ಅಧ್ಯಕ್ಷ ಕುರ ಹಟ್ಟಿ ಮಹೇಶ್ ನಗರಸಭೆ ಸದಸ್ಯರಾದ ಗಾಯತ್ರಿ ಮೋಹನ್ ಯೋಗೀಶ್ ನಾಗೇಶ್ ರಾಜ್, ಬಸವರಾಜ್ ನಾಗರಾಜ್, ದೇಬೂರು ಅಶೋಕ್ ಸೇರಿದಂತೆ ಹಲವು ಮುಖಂಡರು ಬಡವನೆಯ ನಿವಾಸಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!