ಉದಯವಾಹಿನಿ, ಕರ್ನಾಟಕದ ಜಲಾಶಯಗಳು ಬಹುತೇಕ ತುಂಬಿದ್ದರೂ ಜುಲೈ ತಿಂಗಳು ಮತ್ತು ಆಗಸ್ಟ್ ಆರಂಭಕ್ಕೆ ಹೋಲಿಸಿದರೆ ಕಳೆದ 10 ದಿನಗಳಿಂದ ಡ್ಯಾಮ್ಗಳಿಗೆ ನೀರಿನ ಹರಿವು ಪ್ರಮಾಣ ಇಳಿಕೆ ಕಂಡಿದೆ. ಇತ್ತೀಚೆಗೆ ಉತ್ತಮ ಮಳೆ ಸುರಿಯುತ್ತಿದೆ. ಆದರೆ ಕೇರಳ, ಮಲೆನಾಡು ಭಾಗ ಸೇರಿದಂತೆ ಹಲವೆಡೆ ಮಳೆ ತಗ್ಗಿದ ಕಾರಣ ಜಲಾಶಯಗಳಿಗೆ ಬರಬೇಕಿದ್ದ ನೀರಿನ ಹರಿವಿನಲ್ಲಿ ಕೊಂಚ ತಗ್ಗಿದೆ.
ಒಳ ಹರಿವು ಚೆನ್ನಾಗಿದ್ದರೂ ಹೊರ ಹರಿವು ಹೆಚ್ಚಿರುವ ಕಾರಣ ಕೆಲವು ಜಲಾಶಯಗಳ ನೀರಿನ ಮಟ್ಟದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಆದರೆ, ಕೆಆರ್ಎಸ್, ಹೇಮಾವತಿ ಜಲಾಶಯಗಳ ನೀರಿನ ಪ್ರಮಾಣ ಏರಿಕೆಯಾಗಿದೆ. ಆದರೆ, ಕಬಿನಿ, ಹಾರಂಗಿ, ಮಲೆನಾಡಿನ ಲಿಂಗನಮಕ್ಕಿ, ಭದ್ರಾ ಜಲಾಶಯಗಳಿಗೆ ಒಳ ಹರಿವು ಪ್ರಮಾಣ ಉತ್ತಮವಾಗಿ ಏರಿಕೆಗೊಂಡಿಲ್ಲ.ಹಾಗಿದ್ದರೆ ಯಾವ್ಯಾವ ಜಲಾಶಯದಲ್ಲಿ ಇಂದು ನೀರಿನ ಮಟ್ಟ ಎಷ್ಟಿದೆ? ಎಷ್ಟು ಟಿಎಂಸಿ ನೀರಿದೆ? ಒಳ ಹರಿವು ಹಾಗೂ ಹೊರ ಹರಿವು ಎಷ್ಟಿದೆ ಎಂಬುದನ್ನು ಈ ಮುಂದೆ ತಿಳಿಯೋಣ.ಕೆಆರ್ಎಸ್ ಜಲಾಶಯ
ಗರಿಷ್ಠ ಮಟ್ಟ: 124.80 ಅಡಿ , ಇಂದಿನ ಮಟ್ಟ: 123.68 ಅಡಿ, ಗರಿಷ್ಠ ಮಿತಿ: 49.452 ಟಿಎಂಸಿ, ಇಂದಿನ ಮಿತಿ: 47.898 ಟಿಎಂಸಿ, ಒಳ ಹರಿವು: 8122 ಕ್ಯೂಸೆಕ್, ಹೊರ ಹರಿವು: 7299 ಕ್ಯೂಸೆಕ್ಸ್, ಕಬಿನಿ ಜಲಾಶಯ, ಗರಿಷ್ಠ ಮಟ್ಟ: 2284.00 ಅಡಿ, ಇಂದಿನ ಮಟ್ಟ: 2282.28 ಅಡಿ, ಗರಿಷ್ಠ ಮಿತಿ: 19.52 ಟಿಎಂಸಿ, ಇಂದಿನ ಮಿತಿ: 18.41 ಟಿಎಂಸಿ, ಒಳಹರಿವು: 2966 ಕ್ಯೂಸೆಕ್ಹೊರಹರಿವು: 2850 ಕ್ಯೂಸೆಕ್, ಹೇಮಾವತಿ ಜಲಾಶಯ, ಗರಿಷ್ಠ ಮಟ್ಟ – 2922 ಅಡಿ, ಇಂದಿನ ಮಟ್ಟ – 2920.90 ಅಡಿ, ಗರಿಷ್ಠ ಮಿತಿ – 36.040 / 37.10 ಟಿಎಂಸಿಒಳಹರಿವು – 5500 ಕ್ಯೂಸೆಕ್, ಒಟ್ಟು ಹೊರಹರಿವು – 5505 ಕ್ಯೂಸೆಕ್ (ಹೊರ ಹರಿವು ನದಿ – 1100 ಕ್ಯೂಸೆಕ್, ಕಾಲುವೆ – 4405 ಕ್ಯೂಸೆಕ್)
