ಉದಯವಾಹಿನಿ, ಬೀದರ್: ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಮುಂದಾಳತ್ವದಲ್ಲಿ ಕಲಾವಿದರು ಇಲ್ಲಿಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಬುಧವಾರ ಸಂಜೆ ಪ್ರದರ್ಶಿಸಿದ ಭಕ್ತಿ ನೃತ್ಯಗಳು ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವದ ಮೆರುಗು ಹೆಚ್ಚಿಸಿದವು.
ಕಲಾವಿದರು ವಿವಿಧ ಹಾಡುಗಳ ತಾಳಕ್ಕೆ ತಕ್ಕಂತೆ ಭರತನಾಟ್ಯ ಹಾಗೂ ಜಾನಪದ ನೃತ್ಯಗಳನ್ನು ಪ್ರದರ್ಶಿಸಿದರು. ಭಕ್ತಿ ಲೋಕ ಸೃಷ್ಟಿಸಿ ಸಭಿಕರ ಕರತಾಡನಕ್ಕೆ ಪಾತ್ರರಾದರು.
ಪುಷ್ಪಾಂಜಲಿ, ಓಂ ಶಂಭೋ ಶಿವ ಶಂಭೋ, ರಾಮ ಎಂಬ ಎರಡಕ್ಷರ, ರಾಯರ ಕುರಿತ ರಾಘವೇಂದ್ರ ಗೀತೆ, ಭವಾನಿ ಮಾತೆ ಕುರಿತ ಮರಾಠಿ ಗೀತೆ, ಮಹಾಲಕ್ಷ್ಮಿ ಅಷ್ಟೋತ್ತರ ಸ್ತೋತ್ರ ನಮಸ್ತೇತು ಮಹಾಮಯೆ ಮೇಲೆ ಭರತ ನಾಟ್ಯ ಪ್ರದರ್ಶನ ನೀಡಿದರು. ಶಿವನು ಭೀಕ್ಷೆಗೆ ಬಂದ, ಜಕಣಕ ಜಾನಪದ ನೃತ್ಯಗಳನ್ನೂ ಪ್ರದರ್ಶಿಸಿದರು.
ಕೃಷ್ಣನ ಬಾಲ ಲೀಲೆಗಳ ‘ಕುಣಿದಾಡೋ ಕೃಷ್ಣ’, ಹಾವು-ಮುಂಗುಸಿ ಕುರಿತ ‘ಹೇಳಿದ್ದು ಸುಳ್ಳಾಗಬಹುದು’ ನೀತಿ ಕತೆ ರೂಪಕ ಎಲ್ಲರ ಗಮನ ಸೆಳೆದವು.
ತ್ರಿಶಾ, ಪ್ರಿಯಾಂಕ, ಸ್ವಾತಿ, ಅನ್ನಪೂರ್ಣ, ಕೀರ್ತಿ, ಸುಧಾ, ರಾಣಿ, ಅನನ್ಯ, ಕಾವ್ಯ, ಮಾನ್ಯತಾ, ಸೌಜನ್ಯ, ಬಸವಶ್ರೀ, ಅತಿಥಿ, ಶ್ರಾವ್ಯ, ಸರಸ್ವತಿ, ಅನ್ವಿತಾ, ಸಾನ್ವಿ, ಶ್ರೇಯಾ, ಶ್ರೇಯಾ ಶಿಂದೆ, ರೋಶನಿ, ಸಂಚಿತಾ ತಮ್ಮ ಕಲಾ ಕೌಶಲ ಪ್ರದರ್ಶಿಸಿ ಸೈ ಎನಿಸಿಕೊಂಡರು.
ಮಠದ ಪದಾಧಿಕಾರಿಗಳು, ಗಣ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!