ಉದಯವಾಹಿನಿ, ಬೀದರ್: ಪಾಲಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ಅಂಚೆ ಇಲಾಖೆ ಸೇವೆಗಳ ಜಾಗೃತಿ ಮೂಡಿಸಬೇಕು ಎಂದು ಅಂಚೆ ಸೇವೆಗಳ ನಿರ್ದೇಶಕಿ ವಿ. ತಾರ ಹೇಳಿದರು.
ನಗರದ ಜೀಜಾಮಾತಾ ಪ್ರೌಢಶಾಲೆಯಲ್ಲಿ ಬುಧವಾರ ಅಂಚೆ ಜನ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳಿಗೆ ಸಣ್ಣ ಉಳಿತಾಯ, ಆರ್ಥಿಕ ನಿರ್ವಹಣೆ ಜ್ಞಾನ ನೀಡಬೇಕು. ಫಿಲಾಟೆಲಿ, ಅಂಚೆ ಚೀಟಿಗಳ ಸಂಗ್ರಹ ಹವ್ಯಾಸಗಳು ಮಕ್ಕಳ ಸವಾರ್ಂಗೀಣ ಬೆಳವಣಿಗೆಗೆ ಸಹಕಾರಿಯಾಗಲಿವೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್. ದೊಡ್ಡೆ ಮಾತನಾಡಿ, ಅಂಚೆ ಇಲಾಖೆ ಪ್ರತಿಯೊಬ್ಬರಿಗೂ ಯಾವುದಾದರೂಂದು ರೂಪದಲ್ಲಿ ಕೊಡುಗೆ ನೀಡಿದೆ ಎಂದು ಹೇಳಿದರು.
ಜೀಜಾ ಮಾತಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತೀಶ್ ಮುಳೆ ಮಾತನಾಡಿ, ಸಂಸ್ಥೆ ಮಕ್ಕಳ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ನಡೆಸಲು ಸದಾ ಸಿದ್ಧವಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬೀದರ್ ಅಂಚೆ ಅಧೀಕ್ಷಕರು ಮಾತನಾಡಿ, ಸಾರ್ವಜನಿಕರು ಅಂಚೆ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಸೇವೆಗಳ ಪ್ರಯೋಜನ ಪಡೆಯಬೇಕು ಎಂದು ಹೇಳಿದರು. ಪ್ರಧಾನ ಅಂಚೆ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್ ಮಾತನಾಡಿ, ಅಂಚೆ ಜನ ಸಂಪರ್ಕ ಅಭಿಯಾನವು ಇಲಾಖೆಯ ಸೇವೆಗಳನ್ನು ಗ್ರಾಹಕರ ಮನೆ ಬಾಗಿಲಿಗೆ ಒಯ್ಶಲಿದೆ. ಅಭಿಯಾನದ ಸಭೆಗಳಲ್ಲಿ ಇಲಾಖೆಯ ಎಲ್ಲ ಸೇವೆಗಳು ಲಭ್ಯ ಇರಲಿವೆ ಎಂದು ತಿಳಿಸಿದರು.
24 ವಿದ್ಯಾರ್ಥಿನಿಯರನ್ನು ಒಳಗೊಂಡ ಜೀಜಾಮಾತಾ ಕನ್ಯಾ ಫಿಲಾಟೆಲಿ ಕ್ಲಬ್ ರಚಿಸಲಾಯಿತು. ಐ.ಪಿ.ಪಿ.ಬಿ. ಹಿರಿಯ ವ್ಯವಸ್ಥಾಪಕ ವಿಜಯಕುಮಾರ ಪೆÇೀಲ, ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ ಉಪಸ್ಥಿತರಿದ್ದರು. ಈರಣ್ಣ ಬಡಿಗೇರ ಸ್ವಾಗತಿಸಿದರು. ಭೀಮಶಾ ವಂದಿಸಿದರು.
