ಉದಯವಾಹಿನಿ,ಬೆಂಗಳೂರು: ಎಂ.ಬಿ ಪಾಟೀಲ್ ಹೆದರುವ ಮಾತಿಲ್ಲ. ನಾನು ವಿಜಯಪುರದವನು. ಶಾಸಕನಾಗಿ, ಸಂಸದನಾಗಿ ಕೆಲಸ ಮಾಡಿರುವಂತವನು ಎಂಬುದಾಗಿ ಡಿ.ಕೆ ಸುರೇಶ್ ಮಾತಿಗೆ ಎಂಬಿಪಿ ಹೇಳಿದ್ದಾರೆ.ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಎಂ.ಬಿ ಪಾಟೀಲ್ ಹೆದರುವ ಮಾತಿಲ್ಲ.ನಾನು ವಿಜಯಪುರದವನು. 6 ಬಾರಿ ಶಾಸಕನಾಗಿದ್ದೇನೆ. ಒಂದು ಬಾರಿ ಸಂಸದನಾಗಿ ಕೆಲಸ ಮಾಡಿದ್ದೇನೆ ಎಂದರು.ಸಂಸದ ಡಿ.ಕೆ ಸುರೇಶ್ ಆತ್ಮೀಯವಾಗಿ ಪ್ರೀತಿಯಿಂದ ಕರೆದಿದ್ದರು. ಅದಕ್ಕೆ ಹೋಗಿದ್ದೆನು. ಅವರು ಗಟ್ಟಿಯಾಗಿರಿ ಎಂಬುದಾಗಿ ಹೇಳಿದ್ದಾರೆ ಅಷ್ಟೇ. ಅದು ತಮಾಷೆಯಾಗಿ ಹೇಳಿದ್ದಾರೆ. ಅದರ ಹೊರತಾಗಿ ಮಾಧ್ಯಮಗಳಲ್ಲಿ ಬರುತ್ತಿರುವಂತೆ ಯಾವುದೇ ಅವಾಜ್, ಎಚ್ಚರಿಕೆ ನೀಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದರು.
