ಉದಯವಾಹಿನಿ, ಮೈಸೂರು: ನಗರದ ಇಂದಿರಾ ಕಾಂಗ್ರೆಸ್ ಭವನದಲ್ಲಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಜಿಲ್ಲಾ ಘಟಕಗಳಾದ ಸೇವಾದಳ, ಪರಿಶಿಷ್ಟ ಪಂಗಡ ವಿಭಾಗ, ಅಲ್ಪಸಂಖ್ಯಾತ ವಿಭಾಗ ಮತ್ತು ಸಪಾಯಿ ಕರ್ಮಚಾರಿಗಳ ವಿಭಾಗಗಳ ಸರಣಿ ಕಾರ್ಯಕಾರಣಿ ಸಭೆಗಳನ್ನು ಸತತ 9 ಗಂಟೆಗಳ ಕಾಲ ಗ್ರಾಮಾಂತರ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಡಾ ಬಿ ಜೆ ವಿಜಯ್ ಕುಮಾರ್ ಎಐಸಿಸಿ ಹಾಗೂ ಕೆಪಿಸಿಸಿಯ ಸೂಚನೆ ಅನುಸಾರ ಕಾರ್ಯಕಾರಣಿ ಸಭೆಗಳನ್ನು ನಡೆಸುತ್ತಿದ್ದು, ಪಕ್ಷ ಸಂಘಟನೆ ಪಕ್ಷದ ಬಲವರ್ಧನೆ ಕಾರ್ಯಕರ್ತರ ಅಹವಾಲುಗಳು ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ರಣತಂತ್ರಗಳನ್ನು ರೂಪಿಸುವ ಸಲುವಾಗಿ ಕಾರ್ಯಕಾರಣಿ ಸಭೆಯನ್ನು ಕರೆಯಲಾಗಿದೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಸ್ಪಷ್ಟ ಸೂಚನೆ ಮೇರೆಗೆ ನಿಷ್ಕ್ರಿಯೆ ಗೊಂಡಿರುವ ಘಟಕಗಳನ್ನು ವಿಸರ್ಜನೆ ಮಾಡಿ ಅಂತಹ ಘಟಕಗಳಿಗೆ ಹೊಸ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಸಕ್ರಿಯವಾಗಿಸಲು ಈ ಕಾರ್ಯಕಾರಣಿ ಸಭೆಯನ್ನು ಆಯೋಜಿಸಿಲಾಗಿದೆ ಎಂದು ತಿಳಿಸಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.
ಮುಂಬರುವ ಚುನಾವಣೆಗಳಲ್ಲಿ ಪಕ್ಷದಿಂದ ಟಿಕೆಟ್ ಹೊಂದುವ ಆಕಾಂಕ್ಷೆ ಇರುವಂತಹ ಪದಾಧಿಕಾರಿಗಳು ಮೊದಲು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಗುರ್ತಿಸಿಕೊಳ್ಳಬೇಕು ಎಂಬ ಸಲಹೆಯನ್ನು ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ಮತ್ತು ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಎಂದು ಸಹ ಪರಿಶಿಷ್ಟ ಪಂಗಡದ ಜೊತೆಯಲ್ಲೇ ಇರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿ ಪರಿಶಿಷ್ಟ ಪಂಗಡದ ಸಮಾಜದ ಮುಖಂಡರ ಮನವೊಲಿಸಲು ಪ್ರಯತ್ನಿಸಬೇಕು ಎಂದು ಸೂಚಿಸಿದರು.
