ಉದಯವಾಹಿನಿ, ಬೆಂಗಳೂರು: ಮುಖ್ಯ ಮಂತ್ರಿಯವರು ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬುದು ವಿರೋಧಪಕ್ಷಗಳ ಬಯಕೆ. ಅದು ಸಹಜವೂ ಇರಬಹುದು. ಆದರೆ ನಮ ಉದ್ದೇಶ ಮುಖ್ಯಮಂತ್ರಿಯವರು ಐದು ವರ್ಷ ಮುಂದುವರೆಯಬೇಕು ಎಂಬುದಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಯಾವುದೇ ಕ್ಷಣದಲ್ಲಿ ಸಿದ್ದರಾಮಯ್ಯ ತಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಿದ್ದಾರೆ. ಸಹಜವಾಗಿ ಅವರು ಈ ರೀತಿ ಹೇಳಲೇಬೇಕು. ಅವರ ಉದ್ದೇಶವೂ ಅದೇ ಆಗಿರುತ್ತದೆ ಎಂದರು.
ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ಅಭಿಯೋಜನೆಗೆ ರಾಜ್ಯಪಾಲರು ಪೂರ್ವಾನುಮತಿ ನೀಡಿರುವುದನ್ನು ಪ್ರಶ್ನಿಸಿ ಹೈ ಕೋರ್ಟ್ಗೆ ಸಲ್ಲಿಸಲಾಗಿರುವ ರಿಟ್ ಅರ್ಜಿಯಲ್ಲಿ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಪರಪ್ಪನ ಅಗ್ರಹಾರ ಬಂಧೀಖಾನೆಯಲ್ಲಿ ನಟ ದರ್ಶನ್ ಹೆಚ್ಚುವರಿ ಸೌಲಭ್ಯ ಪಡೆದಿರುವ ಘಟನೆ ವರದಿಯಾದ ಬೆನ್ನಲ್ಲೇ ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳನ್ನು ಬೇರೆ ಕಡೆ ಸ್ಥಳಾಂತರಿಸಲು ಜೈಲಿನ ಅಧಿಕಾರಿಗಳು ತೀರ್ಮಾನಿಸಿದರು. ಎಂಟತ್ತು ಜನರನ್ನು ಸ್ಥಳಾಂತರಿಸಲಾಗುತ್ತಿದೆ. ದರ್ಶನ್ ಸ್ಥಳಾಂತರವಾಗಿದೆಯೋ, ಇಲ್ಲವೋ ಎಂಬುದು ತಮಗೆ ಗೊತ್ತಿಲ್ಲ ಎಂದು ನಗುತ್ತಾ ಹೇಳಿದರು.
ಭದ್ರತಾ ದೃಷ್ಟಿಯಿಂದ ಯಾರು, ಎಲ್ಲಿಗೆ ಸ್ಥಳಾಂತರವಾಗಬೇಕು ಎಂಬ ನಿರ್ಧಾರವನ್ನು ಜೈಲಿನ ಅಧಿಕಾರಿಗಳು ತೆಗೆದುಕೊಂಡಿದ್ದಾರೆ. ಬಳ್ಳಾರಿ ಜಿಲ್ಲೆಗೆ ಜಮೀರ್ ಅಹಮದ್ ಖಾನ್ ಉಸ್ತುವಾರಿ ಸಚಿವರಾಗಿರುವುದಕ್ಕೂ ದರ್ಶನ್ ಅವರನ್ನು ಅಲ್ಲಿಗೆ ಸ್ಥಳಾಂತರಿಸುತ್ತಿರುವುದಕ್ಕೂ ಸಂಬಂಧವಿಲ್ಲ. ಯಾವುದೇ ಜಿಲ್ಲೆಯಾದರೂ ಒಬ್ಬ ಉಸ್ತುವಾರಿ ಸಚಿವರಿದ್ದೇ ಇರುತ್ತಾರೆ. ಜಮೀರ್ ಅಹಮದ್ ಖಾನ್ರಿಂದಾಗಿ ದರ್ಶನ್ ಮತ್ತಷ್ಟು ಸೌಲಭ್ಯ ಪಡೆಯುತ್ತಾರೆ ಎಂಬುದು ಆಧಾರರಹಿತವಾಗಿದೆ. ಯಾರೇ ಇದ್ದರೂ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!