ಉದಯವಾಹಿನಿ, ಲಕ್ಷ್ಮೇಶ್ವರ :ಸತತವಾಗಿ ಸುರಿಯುತ್ತಿರುವ ಮಳೆಯಿಂದ ರೈತರು ಜಮೀನುಗಳಲ್ಲಿ ಬೆಳೆದ ಈಗ ಕೈಗೆ ಬಂದಿರುವ ಬೆಳೆಗಳನ್ನು ತರಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದಾರೆ.
ಈಗ ಮಸಾಲೆ ಪದಾರ್ಥವಾದ ಬಳ್ಳೊಳ್ಳಿ ಬೆಳೆ ಬಂದಿದ್ದು ಅದನ್ನು ರಕ್ಷಿಸಲು ರೈತರು ಹರಸಾಹಸ ಪಡುತ್ತಿದ್ದಾರೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದ್ದು ಆದರೆ ಹಲ್ಲು ಇದ್ದರೆ ಕಡಲೇ ಇಲ್ಲ ಕಡಲೆ ಇದ್ದರೆ ಹಲ್ಲು ಇಲ್ಲ ಎಂಬ ಸ್ಥಿತಿ ರೈತರದ್ದಾಗಿದೆ.
ತೋಟಗಾರಿಕಾ ಇಲಾಖೆಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ತಾಲೂಕಿನ ಅಡರಕಟ್ಟಿ ಲಕ್ಷ್ಮೇಶ್ವರ ರಾಮಗಿರಿ ಬಸಾಪುರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಸುಮಾರು 80 ಎಕರೆ ಪ್ರದೇಶದಲ್ಲಿ ಬಳ್ಳೊಳ್ಳಿಯನ್ನು ಬೆಳೆಯಲಾಗಿದೆ. ಈಗ ಬಳ್ಳೊಳ್ಳಿ ಬೆಳೆ ಬಂದಿದ್ದು ಸತತ ಮಳೆಯಿಂದಾಗಿ ಇಳುವರಿ ಕುಂಠಿತಗೊಂಡಿದ್ದು ಬಂದಿರುವ ಬೆಳೆಯನ್ನು ರಕ್ಷಿಸಲು ರೈತರು ಹೆಣಗಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಗೆ ಭಾರಿ ಬೇಡಿಕೆ ಇದ್ದು ಪ್ರತಿ ಎಕರೆಗೆ ಸರಿಸುಮಾರು 6 ಕ್ವಿಂಟಲ್ಲಿನಷ್ಟು ಬರಬೇಕಾಗಿದ್ದ ಬೆಳೆ ಇಳುವರಿ ಕೇವಲ ಎರಡರಿಂದ ಮೂರು ಕ್ವಿಂಟಲ್ ಬಂದಿದ್ದು ಅದು ಪ್ರಮಾಣದಲ್ಲಿ ಸಣ್ಣದಾಗಿದೆ. ಈ ಕುರಿತು ರಾಮಗಿರಿ ಗ್ರಾಮದ ರೈತ ದೇವಪ್ಪ ಅವರು ಸತತ ಮಳೆಯಿಂದಾಗಿ ಇಳುವರಿ ಕುಂಠಿತಗೊಂಡಿದ್ದು ಬಂದಿರುವ ಬೆಳೆಯನ್ನು ರಕ್ಷಿಸಲು ಪರದಾಡಬೇಕಾಗಿದೆ ಎಂದರು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ್ ಹಾವರೆಡ್ಡಿ ಅವರು ಸತತ ಮಳೆಯಿಂದಾಗಿ ಇಳುವರಿ ಕುಂಠಿತವಾಗಿದೆ ತಾಲೂಕಿನಲ್ಲಿ 80 ಎಕರೆ ಪ್ರದೇಶದಲ್ಲಿ ಈ ಮಸಾಲೆ ಪದಾರ್ಥವನ್ನು ಬೆಳೆಯಲಾಗುತ್ತಿದೆ ಎಂದು ಹೇಳಿದರು.
