ಉದಯವಾಹಿನಿ, ಆಳಂದ: ಪಟ್ಟಣದ ಬಸ್ ನಿಲ್ದಾಣ ಮುಂಭಾಗದ ರಾಜ್ಯ ಹೆದ್ದಾರಿ ಸಂಚಾರ ಅವ್ಯವಸ್ಥೆಗೆ ಗುರಿಯಾಗಿದೆ. ಹೆದ್ದಾರಿಯ ಮೇಲೆಯೇ ದ್ವಿಚಕ್ರ ವಾಹನ, ಜೀಪ್, ಕ್ರೋಸರ್, ಆಟೋ, ಕಾರುಗಳು ಮತ್ತು ತಳುಗಾಡಿ ವ್ಯಾಪಾರಿಗಳ ಗಾಡಿ ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ. ತಳುಗಾಡಿಗಳ ನಿರಂತರವಾಗಿ ಪ್ರದೇಶದಲ್ಲಿ ಅಡ್ಡಾದಿಡ್ಡಿಯಾಗಿ ಸುತ್ತಾಡುತ್ತಿರುವುದು ಹೆದ್ದಾರಿ ಸಂಚಾರಕ್ಕೆ ಬಿಕ್ಕಟ್ಟನ್ನುಂಟುಮಾಡಿದೆ. ಇದರಿಂದಾಗಿ ಪಟ್ಟಣದಿಂದ ಸಂಚರಿಸುವ ಮಹಾರಾಷ್ಟ್ರ ಸೇರಿದಂತೆ ಅಂತರಾಜ್ಯ ಗ್ರಾಮೀಣ ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ, ಮತ್ತು ಸ್ಥಳೀಯ ವಾಹನಗಳಿಗೂ ಸುಗಮ ಸಂಚಾರ ಪರದಾಟ ನಿಂತರವಾಗಿ ಮುಂದುವರೆದ್ದು ಜನರ ಆಡಳಿತ ವ್ಯವಸ್ಥೆಯ ಮೇಲೆ ತೀವ್ರ ಬೇಸರ ವ್ಯಕ್ತಪಡಿಸತೊಡಗಿದ್ದಾರೆ.
ಬಸ್ ನಿಲ್ದಾಣ ಮುಂಭಾಗದ ಪ್ರದೇಶ, ಶ್ರೀರಾಮ ಮಾರುಕಟ್ಟೆ, ಮುಖ್ಯ ರಸ್ತೆ, ರಜ್ವಿರೋಡ್ ಮಾರ್ಗದಲ್ಲಿ ಈಗಾಗಲೇ ಹಲವು ದಿನಗಳಿಂದ ಅವ್ಯವಸ್ಥೆಯನ್ನು ಕಣ್ಣಿಗೆ ಬಿದ್ದರೂ ಸಹ, ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿ ಮಾರ್ಪಟ್ಟಿದೆ. ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಇರುವುದು ಬಸ್ ನಿಲ್ದಾಣದ ಬಳಿ ಹೋಗುವ ಪ್ರಯಾಣಿಕರಿಗೆ ಮತ್ತು ಹೆದ್ದಾರಿ ಬಳಕೆದಾರರಿಗೆ ತೀವ್ರ ತೊಂದರೆ ನಿತ್ಯ ನರಕಯಾತನೆ ಅನುಭವಿಸುವಂತ್ತಾಗಿದೆ.
ಮಾರುಕಟ್ಟೆ ರಸ್ತೆ ಹಾಗೂ ಬಸ್ ನಿಲ್ದಾಣ ಮುಂಭಾಗದಲ್ಲಿ ತಳ್ಳುಗಾಡಿ ವ್ಯಾಪಾರಿಗಳು ಹೆದ್ದಾರಿಯ ಮೇಲೆ ಬೆಳ್ಳಂಬೇಳಿಗ್ಗೆ ಠಿಕಾಣಿಹೂಡಿ ಹೂಡುವುದರಿಂದಾಗಿ ಹೆದ್ದಾರಿ ಇಕ್ಕಟ್ಟಾಗಿ ಸುಗಮ ವಾಹನ ಸಂಚಾರಕ್ಕೆ ಅವಕಾಶವಿಲ್ಲವಾಗಿದೆ. ಮಾರುಕಟ್ಟೆಯ ರಸ್ತೆಯಲ್ಲಿ ಐದಾರು ವ್ಯಾಪಾರಿಗಳು ದೊಡ್ಡ ಬುಟ್ಟಿಗಳಿಟ್ಟು ಹೆಚ್ಚಿನ ಜಾಗ ಅಕ್ರಮಿಸಿಕೊಳ್ಳುತ್ತಿದ್ದರಿಂದ ಇತರ ವ್ಯಾಪಾರಿಗಳಿಗೆ ಹಾಗೂ ವಾಹನ ಜನ ಸಂಚಾರಕ್ಕೆ ಅಡಚಿಣಿಯಾಗಿ ಮಾರ್ಪಟ್ಟಿದೆ ಎಂದು ಇತರು ಆಕ್ಷೇಪಿಸುತ್ತಿದ್ದಾರೆ, ರಸ್ತೆಯ ಮೇಲೆಯೇ ಆಟೋಗಳು ಸೇರಿ ಇನ್ನಿತರ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲಿಸತೊಡಗಿದ್ದು, ಇಕ್ಕಟ್ಟಿನ ರಸ್ತೆಯಲ್ಲೇ ಪೊಲಿ ಹುಡಗರ ತಂಡವು ವೇಗವಾಗಿ ಬೈಕ್ ಚಲಿಸುತ್ತಿರುವುದು ಜನ ಸಾಮಾನ್ಯರನ್ನು ಓಡಾಡಲು ಹೆದರುವಂತಾಗಿದೆ. ಅಂಗಡಿಗಳ ಮುಂದಿನ ರಸ್ತೆಯ ಅzರ್sಭಾಗದವರೆಗೆ ಬೈಕ್‍ಗಳು ನಿಲ್ಲಿಸುತ್ತಿದ್ದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ನಿಯಂತ್ರಿಸಬೇಕಾದ ಅಧಿಕಾರಿಗಳ ಮತ್ತು ಸಿಬ್ಬಂದಿಗಳಿಗೆ ಇದಕ್ಕೆ ಸಂಬಂಧವಿಲ್ಲದಂತೆ ನಿಂತ್ತುಕೊಳ್ಳುತ್ತಿರುವುದು ಹೇಳುವವರು ಕೇಳುವವರು ಇಲ್ಲದಂತಾಗಿದೆ. ಈ ಕುರಿತು ಸಂಬಂಧಿತ ಪೊಲೀಸರಾಗಲಿ ಅಥವಾ ಪುರಸಭೆ ಸಂಬಂಧಿತ ಅಧಿಕಾರಿಗಳು ಕ್ರಮಕ್ಕೆ ಮುಂದಾಗದೇ ಇರುವುದು ಜನ ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿ ಮಾರ್ಪಟ್ಟಿದೆ.
