ಉದಯವಾಹಿನಿ, ಬೆಂಗಳೂರು: ಅಮೆರಿಕದ ಕನ್ನಡ ಕೂಟಗಳ ಆಗರ (ಅಕ್ಕ) ನಡೆಸುವ 12ನೇ ವಿಶ್ವ ಕನ್ನಡ ಸಮೇಳನ ಅಮೆರಿಕದ ವರ್ಜಿನಿಯಾ ರಾಜ್ಯದ ಗ್ರೇಟರ್ ರಿಚಂಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಇಂದು ಅದ್ಧೂರಿಯಾಗಿ ಆರಂಭಗೊಂಡಿದೆ.
ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ಒಗ್ಗೂಡಿ ನಡೆಸುತ್ತಿರುವ ಈ ವಿಶ್ವ ಕನ್ನಡ ಸಮೇಳನಕ್ಕೆ ಅತ್ಯಂತ ಉತ್ಸಾಹ ಕಂಡುಬಂದಿದ್ದು, ಕನ್ನಡ ನಾಡಿನ ಹಿರಿಮೆ, ಗರಿಮೆ, ಸಾಹಿತ್ಯ, ಸಂಗೀತದ ಮತ್ತು ಸಂಸ್ಕೃತಿ ಅನಾವರಣಗೊಂಡಿದೆ.
ಎಲ್ಲೆಡೆ ಕನ್ನಡ ಬಾವುಟ ರಾರಾಜಿಸುತ್ತಿದ್ದು, ಉದ್ಘಾಟನೆಗೆ ಮುನ್ನ ನಡೆದ ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ನೂರಾರು ಮಂದಿ ಕನ್ನಡಿಗರು ಭಾಗವಹಿಸಿದ್ದು ಎಲ್ಲರನ್ನೂ ಚಕಿತಗೊಳಿಸಿತು.
ಮಾಯಾನಗರಿ ಎಂದೇ ಬಿಂಬಿತವಾಗಿರುವ ವಿಶ್ವದ ಶ್ರೀಮಂತ ರಾಷ್ಟ್ರ ಅಮೆರಿಕದಲ್ಲಿ ನಡೆಯುತ್ತಿರುವ ಮೂರು ದಿನಗಳ ಈ ಕನ್ನಡ ಸಮೇಳನಕ್ಕೆ ರಾಜ್ಯದಿಂದಲೂ ಕಲಾವಿದರು, ಸಾಹಿತಿಗಳು, ಜನಪ್ರತಿನಿಧಿಗಳು ತೆರಳಲಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ, ಕೃಷಿ ಸಚಿವ ಚೆಲುವರಾಯಸ್ವಾಮಿ, ಮಾಜಿ ಸಚಿವ ಆಂಜನೇಯ ಸೇರಿದಂತೆ ಹಲವು ಗಣ್ಯರು ಅಮೆರಿಕಕ್ಕೆ ಆಗಮಿಸಿದ್ದಾರೆ. ನಾವು ಅಮೆರಿಕದಲ್ಲಿ ನೆಲೆಸಿದ್ದರೂ ನಮ ತಾಯ್ನಾಡಿನ ಬೇರು ಮರೆಯುವಂತಿಲ್ಲ. ನಾವು ಹುಟ್ಟಿದ ಸ್ಥಳವನ್ನು ಸದಾ ನೆನೆದು ಕರ್ಮಭೂಮಿಯಾದ ಭಾರತದ ಬಗ್ಗೆ ನಮಗೆ ಅಪಾರ ಗೌರವವಿದೆ. ವಿಶ್ವದಲ್ಲಿ ಅತಿ ಎತ್ತರಕ್ಕೆ ಬೆಳೆಯುತ್ತಿರುವ ಭಾರತದ ಬಗ್ಗೆ ನಮಗೆ ಅತೀವ ಹೆಮೆಯಿದೆ. ನಮ ಕನ್ನಡ ಭಾಷೆಯನ್ನು ಅಮೆರಿಕದಲ್ಲಿ ಪಸರಿಸುವಂತಹ ಜವಾಬ್ದಾರಿ ನನ್ನ ಮೇಲಿದೆ. ಇದನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂಬ ವಿಶ್ವಾಸವಿದೆ ಎಂದು ರವಿ ಬೋರೇಗೌಡ ಹೇಳಿದರು.
