ಉದಯವಾಹಿನಿ, ಶ್ರೀನಗರ: ಜಮ್ಮು ಮತ್ತು ಕಾಶ್ಮೀರವನ್ನು ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ವಂಶಾಡಳಿತಗಳು ಹಾಳುಮಾಡಿವೆ ಎಂದು ಪ್ರಧಾಇ ಮೋದಿ ಆರೋಪಿಸಿದರು.  ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ (ಸೆಪ್ಟೆಂಬರ್ 14) ದೋಡಾದಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಈ ಮೂರು ಕುಟುಂಬಗಳು ಇಲ್ಲಿ ಭ್ರಷ್ಟಾಚಾರವನ್ನು ಉತ್ತೇಜಿಸಿದವು. ಭೂಗಳ್ಳರ ಗುಂಪುಗಳನ್ನು ಉತ್ತೇಜಿಸಿದರು. ನೀವು ಸಣ್ಣ ಸೌಕರ್ಯಗಳಿಗೆ ಹಂಬಲಿಸುತ್ತಿದ್ದೀರಿ. ಹಾಗಾಗಿ ಸುಭದ್ರ ರಾಜ್ಯ ಕಟ್ಟೋಣ ಎಂದರು. ಈ ಮೂರು ಕುಟುಂಬಗಳು ಸೇರಿ ಕಣಿವೆ ರಾಜ್ಯದಲ್ಲಿ ಮಾಡಿದ್ದು ಪಾಪ ಕೃತ್ಯ. ದಶಕಗಳ ಕಾಲ ರಾಜ್ಯವನ್ನು ಹಾಳುಗೆಡವಲು ಮೂರು ಕುಟುಂಬಗಳು ಕಾಣಿಕೆ ನೀಡಿವೆ. ನೀವು ಮತ್ತು ನಾನು ಒಟ್ಟಾಗಿ ಸುರಕ್ಷಿತ ಕಾಶ್ಮೀರವನ್ನು ನಿರ್ಮಿಸೋಣ ಎಂದು ಜನತೆಗೆ ಕರೆ ನೀಡಿದರು.

ಕಾಂಗ್ರೆಸ್​ಗೆ 20 ಸೀಟು ಬಂದಿದ್ದರೆ ಮೋದಿ ಸೇರಿದಂತೆ ನಾಯಕರೆಲ್ಲ ಜೈಲು ಪಾಲಾಗುತ್ತಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗಷ್ಟೇ ಆರೋಪಿಸಿದ್ದಕ್ಕೆ ತಿರುಗೇಟು ಕೊಟ್ಟ ಮೋದಿ ನಾಯಕರನ್ನು ಜೈಲಿಗೆ ಕಳುಹಿಸಲು ನೀವು ಸರ್ಕಾರ ರಚಿಸಬೇಕಾ? ಅಥವಾ ಜನರ ಕಲ್ಯಾಣಕ್ಕಾಗಿ ನೀವು ಸರ್ಕಾರ ರಚಿಸಬೇಕಾ ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *

error: Content is protected !!