ಉದಯವಾಹಿನಿ, ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಸರಣಿ ಸಾವು ಮುಂದುವರಿದಿದೆ. ಇತ್ತೀಚೆಗಷ್ಟೇ ಕಾಣೆಯಾಗಿದ್ದ ಹಿಂದೂ ವಿದ್ಯಾರ್ಥಿಯ ಶವ ನವೋಗಾಂವ್ ಜಿಲ್ಲೆಯ ನದಿಯೊಂದರಲ್ಲಿ ಒತ್ತೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮೂಲಗಳ ಪ್ರಕಾರ, ಶನಿವಾರ ಮಧ್ಯಾಹ್ನ ನವೋಗಾಂವ್ ಪಟ್ಟಣದ ಕಾಲಿತಾಲಾ ಸ್ಮಶಾನದ ಬಳಿಯ ನದಿಯಲ್ಲಿ ಶವ ಪತ್ತೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರಂಭದಲ್ಲಿ ಮೃತನ ಗುರುತು ಪತ್ತೆಯಾಗಿರಲಿಲ್ಲ, ಬಳಿಕ ಸರ್ಕಾರಿ ಕಾಲೇಜಿನ ವಿಭಾಗದ ವಿದ್ಯಾರ್ಥಿ ಅಭಿ ಅನ್ನೋದು ತಿಳಿದುಬಂದಿದೆ. ಅಭಿ ನವೋಗಾಂವ್‌ ಜಿಲ್ಲೆಯ‌ ಕಾಲೇಜಿನಲ್ಲಿ 4ನೇ ವರ್ಷ ವ್ಯಾಸಂಗ ಮಾಡ್ತಿದ್ದ.

ಅಭಿ ಮೂಲತಃ ಬೊಗುರಾ ಜಿಲ್ಲೆಯ ಆಡಮ್‌ಡಿಘಿ ಉಪಜಿಲ್ಲೆಯ ಸಂತಾಹಾರ್‌ ನಿವಾಸಿ ರಮೇಶ್‌ ಚಂದ್ರ ಅವರ ಪುತ್ರ. ಜನವರಿ 11 ರಂದು ಜಗಳವಾಡಿಕೊಂಡು ಮನೆಯಿಂದ ಹೊರಬಂದು ಕಾಣೆಯಾಗಿದ್ದ. ನಂತರ ಆತನ ಶವ ಪತ್ತೆಯಾದ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಮನೆಯಿಂದ ಹೊರಹೋಗುವಾಗ ಧರಿಸಿದ್ದ ಬಟ್ಟೆಗಳನ್ನ ಆಧರಿಸಿ ಕುಟುಂಬಸ್ಥರು ಶವ ಗುರುತಿಸಿದ್ದಾರೆ.ಅಭಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೆಲವರು ಇದು ಆಕಸ್ಮಿಕ ಸಾವು ಅಂದ್ರೆ, ಇನ್ನೂ ಕೆಲವರು ಕೊಲೆ ಎಂದು ಹೇಳ್ತಿದ್ದಾರೆ.

ಒಂದೂವರೆ ತಿಂಗಳಲ್ಲಿ 17 ಸಾವು: ಬಾಂಗ್ಲಾದೇಶದಲ್ಲಿ ಹಿಂದೂಗಳ ಸರಣಿ ಸಾವು ಸಂಭವಿಸಿದೆ ಕಳೆದ ಒಂದೂವರೆ ತಿಂಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಸುಮಾರು 17 ಮಂದಿ ಸಾವನ್ನಪ್ಪಿದ್ದಾರೆ. ಕೊಲೆಗಡುಕರ ವಿರುದ್ಧ 14 ಪ್ರಕರಣಗಳು ದಾಖಲಾಗಿದ್ದು, 21 ಜನರನ್ನ ಬಂಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!