ಉದಯವಾಹಿನಿ, ಬೆಂಗಳೂರು: ಟೊಮ್ಯಾಟೋ ಬೆಳೆ ನಷ್ಟವಾಗಿದ್ದಕ್ಕೆ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್ ಕಂಪನಿಯಲ್ಲಿ ಸಂಚು ರೂಪಿಸಿ ಲ್ಯಾಪ್‌ಟಾಪ್ ಗಳನ್ನು ಕಳವು ಮಾಡುತ್ತಿದ್ದ ಖತರ್ನಾಕ್ ಸಿಸ್ಟಂ ಆಡ್ಮಿನ್ ನನ್ನು ಬಂಧಿಸಿರುವ ವೈಟ್ ಫೀಲ್ಡ್ ಪೊಲೀಸರು ೨೨ ಲಕ್ಷ ಮೌಲ್ಯದ ಲ್ಯಾಪ್ ಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ತೋರಪಲ್ಲಿಯ ಬಿಸಿಎ,ಎಂಎಸ್ ಪದವೀಧರ ಮುರುಗೇಶ್ ಎಮ್( ೨೯)ಬಂಧಿತ ಆರೋಪಿಯಾಗಿದ್ದು, ಆತನಿಂದ ೨೨ ಲಕ್ಷ ಮೌಲ್ಯದ ೫೦ ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಯು ಸಾಲ ಮಾಡಿ ಹೊಸೂರಿನ ಬಳಿ ಆರು ಎಕರೆಯಲ್ಲಿ ಟೊಮ್ಯಾಟೋ ಬೆಳೆದಿದ್ದು,ಬೆಳೆ ಕೈಕೊಟ್ಟಿದ್ದರಿಂದ ಸಾಕಷ್ಟು ನಷ್ಟವಾಗಿತ್ತು.
ನಷ್ಟದಿಂದ ಮಾಡಿದ ಸಾಲ ತೀರಿಸಲು ತಾನು ಕಳೆದ ಆರು ತಿಂಗಳಿನಿಂದ ವೈಟ್ ಫೀಲ್ಡ್ ನ ಐಟಿಪಿಎಲ್ ನಲ್ಲಿರುವ ಆತುಲ್ ಹ್ಯಾವೆಲ್ ಅವರ ಟೆಲಿಕಲರ್ ಇಂಡಿಯಾ ಪ್ರೈ ಲಿ ನಲ್ಲಿ ಸಿಸ್ಟಂ ಆಡ್ಮನ್ ಆಗಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಕಂಪನಿಯಲ್ಲಿದ್ದ ಲ್ಯಾಪ್ ಟ್ಯಾಪ್‌ಗಳನ್ನು ಒಂದೊಂದಾಗಿ ಕಳ್ಳತನ ಮಾಡಿ, ಒಟ್ಟು ೫೭ ಲ್ಯಾಪ್ ಟ್ಯಾಪ್‌ಗಳನ್ನು ಕಳವು ಮಾಡಿದ್ದನು. ಸರ್ವಿಸ್, ರಿಪೇರಿ ಮಾಡುವ ನೆಪದಲ್ಲಿ ಲ್ಯಾಪ್ ಟ್ಯಾಪ್ ಗಳವು ಮಾಡಿ ಕಂಪನಿಯವರು ಪ್ರಶ್ನೆ ಮಾಡಿದಾಗ ರಜೆ ಊರಿಗೆ ಪರಾರಿಯಾಗಿದ್ದ,ಅಲ್ಲಿಯವರೆಗೆ ಕಂಪನಿಯಲ್ಲಿದ್ದ ಲ್ಯಾಪ್ ಟ್ಯಾಪ್‌ಗಳನ್ನು ಒಂದೊಂದಾಗಿ ೫೭ರವರೆಗೆ ಕಳವು ಮಾಡಿದ್ದನು.

 

Leave a Reply

Your email address will not be published. Required fields are marked *

error: Content is protected !!