ಉದಯವಾಹಿನಿ, ಬೀದರ್ : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಈ ಭಾಗದ ಅಭಿವೃದ್ಧಿಗೆ ರಾಜ್ಯ ಸರಕಾರ 5 ಸಾವಿರ ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದು, ಅನುದಾನದಲ್ಲಿ ಈ ಭಾಗದ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ಪ್ರತಿ ತಿಂಗಳು ಎರಡು ಪುಟಗಳ ಜಾಹೀರಾತು ನೀಡುವಂತೆ ಸಚಿವ ಈಶ್ವರ ಖಂಡ್ರೆ ಮನವಿ ಅವರಿಗೆ ಮಾಡಲಾಯಿತು.
ಈ ಕುರಿತು ಬೀದರ ನಗರದಲ್ಲಿ ನಿನ್ನೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಪಾದಕರ ನಿಯೋಗ , ಈ ಭಾಗದ ಪತ್ರಿಕೆಗಳಿಗೆ ಪ್ರತಿ ಮಾಹೆ ಎರಡು ಪುಟಗಳ ಜಾಹೀರಾತು ನೀಡಿ ಪತ್ರಿಕೆಗಳ ಬೆಳವಣಿಗೆಗೆ ಉತ್ತೇಜನ ನೀಡಬೇಕು. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಗಮನ ಸೆಳೆಯುವಂತೆ ಮತ್ತು ಕೆಕೆಆರ್ಡಿಬಿಯಲ್ಲಿ ಅನುದಾನ ಮಿಸಲು ಇಡುವಂತೆ ಕೋರಲಾಯಿತು.
ಕೊರೋನಾದ ಸಂಕಷ್ಟ ಪರಿಸ್ಥಿತಿಯಲ್ಲೂ ಜಿಲ್ಲಾಮಟ್ಟದ ಪತ್ರಿಕೆಗಳು ಜನರಲ್ಲಿ ಜಾಗೃತಿ ಮೂಡಿಸಸಿದೆ ಇದನ್ನು ತಾವುಗಳು ಗಮನಿಸಿದ್ದೀರಿ. ಸದ್ಯದ ಸಂಕಷ್ಟ ಪರಿಸ್ಥಿತಿಯಲ್ಲೂ ಸ್ಥಳೀಯ ಪತ್ರಿಕೆಗಳು ಪೂರಕವಾದ ಮಾಹಿತಿಗಳನ್ನು ಮುದ್ರಿಸಿ ಜನರಿಗೆ ತಲುಪಿಸುತ್ತಿರುವ ಕ.ಕ ಭಾಗದ ಎಲ್ಲ ಜಿಲ್ಲಾ ಮಟ್ಟದ ಹಾಗೂ ಪ್ರಾದೇಶಿಕ ಪತ್ರಿಕೆಗಳನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡು 5 ಸಾವಿರ ಕೋಟಿ ಅನುದಾನದಲ್ಲಿ ಮಾಡಲಾದ ಅಭಿವೃದ್ದಿ ಕಾರ್ಯಗಳನ್ನು ಜನರಿಗೆ ತಿಳಿಸಲು ಈ ಭಾಗದ ಪತ್ರಿಕೆಗಳಿಗೆ ಜಾಹೀರಾತು ನೀಡುವಂತೆ ಸಂಪಾದಕರು ಹಕ್ಕೊತ್ತಾಯ ಮಂಡಿಸಿದರು.
