ಉದಯವಾಹಿನಿ, ಬೆಂಗಳೂರು: ತೋಟಗಾರಿಕೆ ಇಲಾಖೆ ನಿರ್ಲಕ್ಷ್ಯದಿಂದ ಬೆಂಗಳೂರಲ್ಲಿ ಹಾಪ್ ಕಾಮ್ಸ್ ಕಣ್ಮರೆಯಾಗುತ್ತಿವೆ. ನಗರದಲ್ಲಿ ೫೦ಕ್ಕೂ ಹೆಚ್ಚು ಹಾಪ್ ಕಾಮ್ಸ್‌ಗಳು ಈಗಾಗಲೇ ಬಂದ್ ಆಗಿದೆ.
ಗುಣಮಟ್ಟದ, ತಾಜಾ ಹಣ್ಣು, ತರಕಾರಿಗಳನ್ನು ಗ್ರಾಹಕರಿಗೆ ಪೂರೈಸುವ ಹಾಗೂ ಮಧ್ಯವರ್ತಿಗಳಿಂದ ಮುಕ್ತವಾದ ಮಾರುಕಟ್ಟೆ ಒದಗಿಸುವ ಮಹತ್ವದ ಉದ್ದೇಶದಿಂದ ಹಾಪ್ಸ್ ಕಾಮ್ಸ್‌ಗಳನ್ನು ತೆರೆಯಲಾಗಿತ್ತು.
ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘದ ನಿಧಾನಕ್ಕೆ ಬೆಂಗಳೂರಿನ ಹಲವು ಕಡೆಗಳಲ್ಲಿ ಹಾಪ್ ಕಾಮ್ಸ್ ಗಳು ನಿಧಾನಕ್ಕೆ ಕಣ್ಮರೆಯಾಗುತ್ತಿದೆ. ಈ ಮಹಾತ್ವಾಕಾಂಕ್ಷಿ ಯೋಜನೆ ದಿನದಿಂದ ದಿನಕ್ಕೆ ತನ್ನ ಹೊಳಪನ್ನೇ ಕಳೆದುಕೊಳ್ಳುತ್ತಿದೆ.
ಎರಡು ವರ್ಷಗಳ ಹಿಂದೆ ಬೆಂಗಳೂರು ವ್ಯಾಪ್ತಿಯಲ್ಲಿ ೩೧೬, ಜಿಲ್ಲೆಗಳಲ್ಲಿ ೨೬೨ ಹಾಪ್ಕಾಮ್ಸ್ ಮಳಿಗೆ ಇದ್ದವು. ನಷ್ಟ, ಮೂಲಸೌಲಭ್ಯ ಕೊರತೆಯಿಂದ ಮಳಿಗೆಗಳ ಸಂಖ್ಯೆ ಬೆಂಗಳೂರಿನಲ್ಲಿ ೨೦೦ಕ್ಕೂ ಹೆಚ್ಚು ಕಡಿಮೆಯಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಹಾಪ್ ಕಾಮ್ಸ್ ಮಳಿಗೆಗಳು ಕಾಣೆಯಾಗುತ್ತಿವೆ.
ನಗರದ ವಿಜಯನಗರ ಭಾಗದ ಹತ್ತಿಗುಪ್ಪೆ, ಹಂಪಿನಗರ, ಹೊಸಹಳ್ಳಿಯ ನಾಲ್ಕೈದು ಹಾಪ್ ಕಾಮ್ಸ್ ಗಳು ಬಂದ್ ಆಗಿವೆ. ಈ ಬಗ್ಗೆ ಗ್ರಾಹಕರು ನೋವು ತೋಡಿಕೊಂಡಿದ್ದಾರೆ.
ಹಾಪ್ ಕಾಮ್ಸ್‌ನಿಂದ ನೇರವಾಗಿ ರೈತರಿಂದ ಹಣ್ಣು-ತರಕಾರಿ ಸಿಗ್ತಿತ್ತು. ಬೆಲೆಯೂ ಕಡಿಮೆ ಇತ್ತು. ಆದರೆ ಈಗ ಮುಚ್ಚುತ್ತಿದ್ದು ಮಾರ್ಟ್ ಮತ್ತು ಫ್ರೆಶ್‌ಗಳ ಮೂಲಕ ದುಬಾರಿ ಹಣ ಕೊಟ್ಟು ಖರೀದಿ ಮಾಡಬೇಕಿದೆ ಎಂದಿದ್ದಾರೆ.
