ಉದಯವಾಹಿನಿ, ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಅವರು ಆರ್. ಅಶೋಕ್ ಅವರ ವಿರುದ್ಧ ನಡೆಸಿದ ಷಡ್ಯಂತ್ರ ಕೇಳಿ ನನಗೆ ದಿಗ್ಭ್ರಮೆಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮುನಿರತ್ನ ಅವರ ಏಡ್ಸ್ ಟ್ರ್ಯಾಪ್ ಜಾಲದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಪ್ರಪಂಚ, ದೇಶ ಎಲ್ಲೂ ಕೂಡ ಈ ರೀತಿ ಸಂಚು ಎಲ್ಲೂ ನಡೆದಿಲ್ಲ. ಪಾಪ ಅಶೋಕ್ ಅವರ ವಿರುದ್ಧ ಷಡ್ಯಂತ್ರ ಕೇಳಿ ದಿಗ್ಭ್ರಾಂತಿಗೆ ಒಳಗಾಗಿದ್ದೇನೆ ಎಂದರು.

ಶಾಸಕ ಮುನಿರತ್ನ ಅವರ ಬಗ್ಗೆ ಪ್ರಾರಂಭದಲ್ಲಿ ಅಶೋಕ್ ಏನು ಮಾತನಾಡಿದ್ದಾರೋ ಅದನ್ನು ಗಮನಿಸಿದ್ದೇನೆ.ಈಗ ಅವರು ಮಾತನಾಡಿದ್ದಾರೋ ಅದನ್ನು ಗಮನಿಸಿಲ್ಲ. ಮೊದಲು ಅಶೋಕಣ್ಣ, ವಿಜಯೇಂದ್ರಣ್ಣ, ಕುಮಾರಣ್ಣ, ಡಾ. ಮಂಜುನಾಥ್, ಸಿ.ಟಿ ರವಿ ಅಣ್ಣ ಎಲ್ಲರೂ ಅವರ ಅಭಿಪ್ರಾಯಗಳನ್ನು ಹೇಳಬೇಕು. ಸತ್ಯಾಸತ್ಯತೆಯನ್ನು ತಿಳಿಸಬೇಕು. ಅವರು ಇದಕ್ಕೆ ಉತ್ತರ ಕೊಡಬೇಕು ಎಂದು ಹೇಳಿದರು.

ಈ ವಿಚಾರದಲ್ಲಿ ಏನು ಉತ್ತರಿಸುವುದು, ಸತ್ಯ ಏನಿದೆಯೋ ನಮಗೆ ಗೊತ್ತಿಲ್ಲ. ಯಾರ್‍ಯಾರದು ಏನಾಗಿದೆಯೋ ಮಾಹಿತಿ ಇಲ್ಲ, ನಾವು ಎಲ್ಲವನ್ನು ಪರಿಶೀಲಿಸಬೇಕಿದೆ ಎಂದು ವ್ಯಂಗ್ಯವಾಗಿ ಹೇಳಿದರು. ಶಾಸಕ ಮುನಿರತ್ನ ವಿರುದ್ಧ ಡಿಕೆ ಸಹೋದರರು ಷಡ್ಯಂತ್ರ ನಡೆಸಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಗಳಬಗ್ಗೆ ಕೇಳಿದ ಪ್ರಶ್ನೆಗೆ ಅವರು ನನ್ನನ್ನು ನೆನೆಸಿಕೊಳ್ಳುತ್ತಲೇ ಇರಬೇಕು. ಹಾಗಾಗಿ ಮಾತನಾಡುತ್ತಿದ್ದಾರೆ. ಮುನಿರತ್ನ ಸಮರ್ಥನೆಗೆ ನಿಂತಿರುವ ಬಿಜೆಪಿ ನಾಯಕರ ನಡೆಯನ್ನು ರಾಜ್ಯದ ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿರುವ ಡಿ ನೋಟಿಫಿಕೇಷನ್ ಆರೋಪದ ಬಗ್ಗೆ ನನಗೆ ಮಾಹಿತಿ ಇಲ್ಲ.

Leave a Reply

Your email address will not be published. Required fields are marked *

error: Content is protected !!