ಉದಯವಾಹಿನಿ , ವಾಷಿಂಗ್ಟನ್‌: ಸದ್ಯ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕ್ವಾಡ್‌ ಶೃಂಗಸಭೆಯಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಪನೀಸ್‌‍ ಮತ್ತು ಜಪಾನ್‌ನ ಪ್ರಧಾನಿ ಫುಮಿಯೊ ಕಿಶಿಡಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಎಂಕ್ಯೂ-9ಬಿ ಸ್ಕೈ ಗಾರ್ಡಿಯನ್‌ ಮತ್ತು ಸೀ ಗಾರ್ಡಿಯನ್‌ ಡ್ರೋನ್‌ ಒಪ್ಪಂದ ಮತ್ತು ಕೋಲ್ಕತ್ತಾದಲ್ಲಿ ಸೆಮಿಕಂಡಕ್ಟರ್‌ ಪ್ಲಾಂಟ್‌ ಸ್ಥಾಪನೆ ಸೇರಿದಂತೆ ಹಲವು ವಿಷಯಗಳನ್ನು ನಾಯಕರು ಚರ್ಚೆ ನಡೆಸಿದ್ದಾರೆ.
ಭಾರತದ ಸಶಸ್ತ್ರ ಪಡೆಗಳ ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ ಸಾಮರ್ಥ್ಯಗಳನ್ನು ಹೆಚ್ಚಿಸುವ 31 ಜನರಲ್‌ ಅಟಾಮಿಕ್‌್ಸ ಎಂಕ್ಯೂ-9ಬಿ(16 ಸ್ಕೈ ಗಾರ್ಡಿಯನ್‌ ಮತ್ತು 15 ಸೀ ಗಾರ್ಡಿಯನ್‌) ಡ್ರೋನ್‌ಗಳ ಖರೀದಿ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇದಕ್ಕೆ ಬೈಡನ್‌ ಅವರಿಂದ ಗ್ರೀನ್‌ ಸಿಗ್ನಲ್‌ ಸಹ ಸಿಕ್ಕಿದೆ ಎಂದು ಹೇಳಲಾಗಿದೆ.
ಈ ವೇಳೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌‍.ಜೈಶಂಕರ್‌, ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ, ಅಮೆರಿಕದಲ್ಲಿರುವ ಭಾರತದ ರಾಯಭಾರಿ ವಿನಯ್‌ ಮೋಹನ್‌ ಕ್ವತ್ರ ಪ್ರಧಾನಿ ಜೊತೆಗಿದ್ದರು. ಅಮೆರಿಕದ ತಂಡದಲ್ಲಿ ಸೆಕ್ರೆಟರಿ ಆಫ್‌ ಸ್ಟೇಟ್‌ ಆಯಂಟನಿ ಬ್ಲಿಂಕನ್‌, ರಾಷ್ಟ್ರೀಯ ಭದ್ರತಾ ವಿಚಾರಗಳಲ್ಲಿ ಅಮೆರಿಕ ಅಧ್ಯಕ್ಷರಿಗೆ ಸಲಹೆ ನೀಡುವ ಟಿ.ಹೆಚ್‌.ಜೆಕ್‌ ಸಲ್ಲಿವನ್‌, ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್‌ ಗರ್ಸೆಟ್ಟಿ ಇದ್ದರು.ವಿಲ್ಲಿಂಗ್ಟನ್‌ನಿಂದ ಮೋದಿ ನ್ಯೂಯಾರ್ಕ್‌ಗೆ ತೆರಳಲಿದ್ದು, ಇಂದು(ಭಾನುವಾರ) ಲಾಂಗ್‌ ಐಲ್ಯಾಂಡ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.ಇದಾದ ಬಳಿಕ ನಾಳೆ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭವಿಷ್ಯದ ಶೃಂಗಸಭೆಯ ಕುರಿತು ಭಾಷಣ ಮಾಡಲಿದ್ದಾರೆ. ವಿವಿಧ ಅಮೆರಿಕದ ಕಂಪೆನಿಗಳ ಮುಖ್ಯಸ್ಥರ ಜೊತೆಗೆ ಕ್ವಾಂಟಮ್‌ ಕಂಪ್ಯೂಟಿಂಗ್‌, ಕೃತಕ ಬುದ್ಧಿಮತ್ತೆ(ಎಐ) ಹಾಗು ಸೆಮಿಕಂಡಕ್ಟರ್‌ ಮುಂತಾದ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅಮರಿಕ ಅಧಕ್ಷ ಬೈಡನ್‌, ಇತಿಹಾಸದಲ್ಲೇ ಇದೀಗ ಭಾರತದೊಂದಿಗೆ ಅಮೆರಿಕ ಶಕ್ತಿಯುತ, ನಿಕಟ ಪಾಲುದಾರಿಕೆ ಹೊಂದಿದೆ. ಪ್ರತಿ ಬಾರಿ ನಾವು ಒಟ್ಟಿಗೆ ಕುಳಿತಾಗ ನನಗೆ ಹೊಸ ಪ್ರದೇಶಗಳಲ್ಲಿ ನಮ ಸಹಕಾರದ ಕುರಿತು ಹೊಳೆಯುತ್ತದೆ. ಈ ನಿಟ್ಟಿನಲ್ಲಿ ಇವತ್ತಿನ ದಿನವೂ ಹೊರತಲ್ಲ ಎಂದು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!