ಉದಯವಾಹಿನಿ, ಅಥಣಿ : ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ
ಸವದಿ ದರ್ಗಾ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸುಮಾರು 18 ಲಕ್ಷ 50 ಸಾವಿರ ರೂಗಳ ವೆಚ್ಚದಲ್ಲಿ 2 ಕೊಠಡಿಗಳ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷದ ಯುವ ಧುರೀಣರು, ಸಮಾಜ ಸೇವಕ ಚಿದಾನಂದ ಸವದಿ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಭೂಮಿ ಪೂಜೆ ನೆರವೇರಿದ ಯುವ ಧುರೀಣ ಚಿದಾನಂದ ಸವದಿ ಮಾತನಾಡಿ
ನಮ್ಮೂರ ಶಾಲೆ, ನಮ್ಮ ಶಾಲೆ ಎಂದು ಭಾವಿಸಬೇಕು. ಗ್ರಾಮೀಣ ಭಾಗದ ರೈತರ ಮಕ್ಕಳಿಗೆ ಶಿಕ್ಷಣದ ಲಾಭ ಪಡೆಯಲು ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಹಣ ವಿನಿಯೋಗಿಸುತ್ತಿದೆ. ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಈಗ 2 ಕೊಠಡಿಗಳನ್ನ ನಿರ್ಮಿಸಲಾಗುತ್ತಿದೆ ಅವು ಸದುಪಯೋಗವಾಗಬೇಕೆಂದು ತಿಳಿಸಿದರು. ಮುಖಂಡರಾದ ಎಸ್ ಆರ್ ಘೂಳಪ್ಪನವರ, ಶ್ರೀಶೈಲ ಮಾಯಪ್ಪನವರ, ಶಂಕರ ಅವಟಿ, ಹನೀಫ್ ಮುಲ್ಲಾ ಸೇರಿದಂತೆ ಗ್ರಾಮದ ಹಿರಿಯ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
