ಉದಯವಾಹಿನಿ, ನವದೆಹಲಿ : ಭಾನುವಾರ ಅಂದ್ರೆ ನಾಳೆ 75 ರೂಪಾಯಿ ಮುಖಬೆಲೆಯ ನಾಣ್ಯವನ್ನ ದೇಶಾದ್ಯಂತ ಬಿಡುಗಡೆ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಹೊಸ ಸಂಸತ್ ಕಟ್ಟಡವನ್ನು ಉದ್ಘಾಟಿಸುವ ಗೌರವ ಸೂಚಕವಾಗಿ ಹೊಸ ನಾಣ್ಯವನ್ನ ಸರ್ಕಾರ ಬಿಡುಗಡೆ ಮಾಡಲಿದೆ.ಅದ್ರಂತೆ, ಈ ಕುರಿತು ಆರ್ಥಿಕ ವ್ಯವಹಾರಗಳ ಇಲಾಖೆ ಅಧಿಕೃತ ಗೆಜೆಟ್ ಹೊರಡಿಸಿದೆ.ಈ ಹೊಸ ನಾಣ್ಯದ ತೂಕ ಸುಮಾರು 35 ಗ್ರಾಂ ಆಗಿದ್ದು, ನಾಣ್ಯದಲ್ಲಿ ಅಶೋಕ ಚಕ್ರ ಸಿಂಹವಿದೆ, ಮಧ್ಯದಲ್ಲಿ ದೇವನಾಗರಿ ಲಿಪಿಯಲ್ಲಿ ಭರತ್ ಹೆಸರು ಮತ್ತು ಇಂಗ್ಲಿಷ್ನಲ್ಲಿ ಇಂಡಿಯಾ ಪದ ಬರೆಯಲಾಗಿದೆ. ಇನ್ನು ರೂಪಾಯಿ ಚಿಹ್ನೆ ಮತ್ತು ಈ ನಾಣ್ಯದ ವಿನಿಮಯ ಮೌಲ್ಯವು 75 ರೂಪಾಯಿ. ಇನ್ನೊಂದು ಬದಿಯಲ್ಲಿ ಹೊಸ ಸಂಸತ್ ಭವನದ ಆವರಣದ ಪ್ರತಿಮೆ ಇದ್ದು, ಕೆಳಭಾಗದಲ್ಲಿ 2023 ಎನ್ನುವ ಅಂಕಿಯಿದೆ. ಇನ್ನು ಈ 75 ರೂಪಾಯಿ ನಾಣ್ಯವು ದೇಶದ ಸ್ವಾತಂತ್ರ್ಯದ ಸಂಕೇತವಾಗಿದೆ.
