ಉದಯವಾಹಿನಿ, ಮೈಸೂರು: ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ತಂದೊಡ್ಡಿರುವ ಸ್ನೇಹಮಯಿ ಕೃಷ್ಣ, ಈಗ ಜಾರಿ ನಿರ್ದೇಶನಾಲಯಕ್ಕೆ ಮಹತ್ವದ ದಾಖಲೆಗಳನ್ನು ನೀಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌.ಸಿ.ಮಹದೇವಪ್ಪ ಹಾಗೂ ಇತರ ಕಾಂಗ್ರೆಸ್‌‍ ನಾಯಕರು ನಿದ್ದೆಗೆಡುವಂತೆ ಮಾಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಡಾ ಪ್ರಕರಣದಲ್ಲಿ ಹಣ ಅಕ್ರಮ ವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಪ್ರಬಲ ಸಾಕ್ಷ್ಯವನ್ನೂ ನೀಡಿದ್ದೇನೆ ಎಂದರು.
ಕೋಟ್ಯಂತರ ರೂಪಾಯಿಗಳ ಲಂಚದ ಹಣವನ್ನು ಬಳಕೆ ಮಾಡಿ ಸೆಟ್‌್ಲಮೆಂಟ್‌ ಡಿಡ್‌ಗಳ ಮೂಲಕ ನಿವೇಶನ ಪಡೆದಿದ್ದಾರೆ. ಇದನ್ನೂ ಇಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌.ಸಿ.ಮಹದೇವಪ್ಪ, ಅವರ ಸಹೋದರರ ಪುತ್ರ ನವೀನ್‌ ಬೋಸ್‌‍ ಹೆಸರಿಗೆ ಇರುವ ಸೆಟ್ಲ್ ಮೆಂಟ್ ಡೀಡ್‌ ಹಾಗೂ ಮುಡಾದ ಅಧ್ಯಕ್ಷರಾಗಿದ್ದ ಮರಿಗೌಡ ಮತ್ತು ಅವರ ಸಹೋದರ ಶಿವಣ್ಣ ಹೆಸರಿಗೆ ನೋಂದಣಿಯಾಗಿರುವ ದಾಖಲಾತಿಗಳನ್ನು ನೀಡಿದ್ದೇನೆ. ಇದರ ವಿರುದ್ಧವೂ ತನಿಖೆಯಾಗಬೇಕು ಎಂದು ಒತ್ತಾಯಿಸಿರುವುದಾಗಿ ಹೇಳಿದರು. ಹೆಚ್‌.ಸಿ.ಮಹದೇವಪ್ಪ ಅವರ ಸಹೋದರನ ಮಗ ನವೀನ್‌ ಬೋಸ್‌‍ ಎಂಬುವವರು ಮಂಜುನಾಥ್‌ ಎಂಬುವವರಿಂದ ಹಾಗೂ ಇದೇ ಮಂಜುನಾಥ್‌ರಿಂದ ಮರಿಗೌಡರು ತಮ ಸಹೋದರ ಶಿವಣ್ಣನ ಹೆಸರಿಗೆ ಸೆಟ್ಲಮೆಂಟ್‌ ಡಿಡ್‌ ಮಾಡಿಕೊಂಡಿದ್ದಾರೆ ಎಂದರು.  ಜಾರಿ ನಿರ್ದೇಶನಾಲಯ ಕಚೇರಿಗೆ ಭೇಟಿ ನೀಡಿ 500 ಪುಟಗಳ ದಾಖಲೆಗಳನ್ನು ನೀಡಿದ್ದೇನೆ.

Leave a Reply

Your email address will not be published. Required fields are marked *

error: Content is protected !!