ಉದಯವಾಹಿನಿ, ಬೆಂಗಳೂರು: ಮಲ್ಲೇಶ್ವರಂನ ವಾಸವಿ ಪೀಠದಿಂದ ಕೆವಿಸಿಎಲ್ ಕ್ರಿಕೆಟ್ ಲೀಗ್ ಆಯೋಜಿಸಲಾಗಿತ್ತು.
ಈ ಕ್ರಿಕೆಟ್ ಪಂದ್ಯಾವಳಿ ಕ್ರೀಡಾ ಮನೋಭಾವ, ಪರಸ್ಪರ ಗೌರವ ಮತ್ತು ಕೋಮು ಸೌಹಾರ್ದತೆಯ ಮೌಲ್ಯಗಳನ್ನು ಪ್ರೋತ್ಸಾಹಿಸಿತು. ಪಂದ್ಯಾವಳಿ ಉದ್ಘಾಟಿಸಿದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಕ್ರೀಡೆಗಳು ಹೇಗೆ ಸಮುದಾಯಗಳನ್ನು ಒಗ್ಗೂಡಿಸಬಹುದು ಎಂಬುದಕ್ಕೆ ಒಂದು ಉತ್ತಮ ಉದಾಹರಣೆ ಯಾಗಿದೆ.
ಮಹಾತ್ಮ ಗಾಂಧೀಜಿಯವರು ಸಹ ಆರ್ಯ ವೈಶ್ಯ ಸಮುದಾಯ ಮುನ್ನೆಡಿಸ್ಸಿದ್ದರು,ಅವರ ಜನ್ಮ ದಿನಾಚರಣೆಯ ಸ್ಮರಣಾರ್ಥ ,ಕರ್ನಾಟಕ ವೈಶ್ಯ ಕ್ರಿಕೆಟ್ ಲೀಗ್ ೧೦ ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪಂದ್ಯಾವಳಿ ಆಯೋಜಿಸಿರುವುದು ಉತ್ತಮ ಬೆಳವಣಿಗೆ.ಕ್ರೀಡೆಗಳಿಂದ ಸಮುದಾಯ ಸಂಘಟನೆ ಸಾಧ್ಯ ಎಂದರು. ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸಿಎ ಡಾ.ವಿಷ್ಣು ಭರತ್ ಆಲಂಪಲ್ಲಿ ವಿಜೇತರಿಗೆ ಓಟಗಾರರಿಗೆ ಬಹುಮಾನ ವಿತರಿಸಿದರು.
