ಉದಯವಾಹಿನಿ, ಚಿಕ್ಕಬಳ್ಳಾಪುರ: ದಾನಿಗಳಿಂದ ಮಧ್ಯಾಹ್ನದ ಊಟ ಕೊಡಿ ಎಂದು ಹೇಳಿದವರೇ ರಾಜಕಾರಣದ ರಾಜಕೀಯಕ್ಕೆ ಮಾರುಹೋಗಿ ರಾಜಕಾರಣಿಯೊಬ್ಬರ ಅನುಮತಿ ಸಿಗುವವರೆವಿಗೂ ಊಟ ಕೊಡಬೇಡಿ ಎಂದು ನಿರಾಕರಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಹೌದು ಇದು ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಂಗತಿ…
ಕಳೆದ 15ದಿನಗಳ ಹಿಂದೆ ನಗರದ ಪ್ರತಿಷ್ಠಿತ ಭಗತ್‌ ಸಿಂಗ್‌ ಚಾರಿಟೇಬಲ್‌ ಟ್ರಸ್ಟ್‌ ಸಂಸ್ಥಾಪಕ ಸಂದೀಪ ಬಿ ರೆಡ್ಡಿ ಅವರಿಂದ ಮಧ್ಯಾಹ್ನದ ಊಟದ ಬೇಡಿಕೆ ಇಟ್ಟಿದ್ದ ಕಾಲೇಜಿನವರು ಊಟ ಕೊಡಲು ಎಲ್ಲ ರೀತಿಯ ಸಿದ್ಧಪಡಿಸಿಕೊಂಡರೆ ಇದಕ್ಕೆ ರಾಜಕೀಯ ಲೇಪನ ಹಚ್ಚಿ ಶಾಸಕರು ಊಟ ಕೊಡಲು ಅನುಮತಿ ಕೊಡುವವರೆಗೂ ನೀವು ಊಟ ಕೊಡಬೇಡಿ ಎಂದು ಪ್ರಾಂಶುಪಾಲರು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಇದರಿಂದ ಬೇಸತ್ತ ಸಮಾಜ ಸೇವಕರು ಹಾಗೂ ಭಗತ್‌ ಸಿಂಗ್‌ ಚಾರಿಟೇಬಲ್‌ ಟ್ರಸ್ಟ್‌ ಸಂಸ್ಥಾಪಕ ಅಧ್ಯಕ್ಷ ನೀವು ಅನುಮತಿ ಕೊಡುವುದು ಏನು? ಹಸಿದ ಹೊಟ್ಟೆಗೆ ಅನ್ನ ಕೊಟ್ಟೆ ಕೊಡುವೆ ಎನ್ನುವ ಛಲದೊಂದಿಗೆ ಕೊಟ್ಟ ಮಾತನ್ನ ಉಳಿಸಿಕೊಂಡು ವಿದ್ಯಾರ್ಥಿನಿಯರ ಹಸಿದ ಹೊಟ್ಟೆಗೆ ಅನ್ನ ಕೊಡಲು ಮುಂದಾಗಿದ್ದಾರೆ.
ನಗರದ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿನ ವಿದ್ಯಾರ್ಥಿನಿಯರಿಗೆ ಮಧ್ಯಾಹ್ನದ ಊಟವನ್ನು ನೀಡುವ ವಿಚಾರ ಇದೀಗ ರಾಜಕೀಯ ದಾಳವಾಗಿ ಪರಿಣಮಿಸಿದ್ದು, ಆರಂಭದಲ್ಲಿ ಊಟದ ವ್ಯವಸ್ಥೆ ಮಾಡಿಕೊಡಿ ಎಂದವರೆ ಇದೀಗ ಅನುಮತಿ ಬೇಕು ಎಂದು ನಿರಾಕರಿಸಿರುವುದು ಸೋಜಿಗ.ಕಳೆದ ಕೆಲ ದಿನಗಳ ಹಿಂದೆ ನಡೆದ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಭಗತ್‌ ಸಿಂಗ್‌ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಸಂದೀಪ್‌ರೆಡ್ಡಿ ಅವರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡುವಂತೆ ಕಾಲೇಜಿನ ಪ್ರಾಂಶುಪಾಲರು ಒತ್ತಾಯಿಸಿದ್ದು, ಇದಕ್ಕೆ ಬದ್ಧನಾದ ಸಂದೀಪ್‌ರೆಡ್ಡಿ ಮಧ್ಯಾಹ್ನದ ಊಟ ನೀಡುವುದಾಗಿ ಘೋಷಣೆ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!