ಉದಯವಾಹಿನಿ, ಗದಗ: ನಗರದ ತೋಂಟದಾರ್ಯ ಮಠದ ಪಕ್ಕದ ಮೈದಾನದಲ್ಲಿ ನ್ಯೂ ಕಲಾ ದರ್ಶನ ಆರ್ಟ್ ಆಯಂಡ್ ಕ್ರಾಫ್ಟ್ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದ್ದು, ಒಂದೇ ಸೂರಿನಡಿ ಸಾವಿರಾರು ಬಗೆಯ ಕರಕುಶಲ ವಸ್ತುಗಳನ್ನು ಕೊಳ್ಳುವ ಅವಕಾಶ ಲಭ್ಯವಿದೆ.ಮನೆಯಲ್ಲಿನ ಗೋಡೆಗಳ ಅಂದ ಹೆಚ್ಚಿಸುವ ಕಲಾಕೃತಿಗಳು, ಮನೆಗೆ ಮೆರುಗು ನೀಡುವ ಪೀಠೋಪಕರಣಗಳು, ಕಾರ್ಪೆಟ್‌ಗಳು, ಅಡುಗೆ ಮನೆಯ ಕೆಲಸವನ್ನು ಸರಳಗೊಳಿಸುವ ನಾನಾ ರೀತಿಯ ವಸ್ತುಗಳು ಇಲ್ಲಿ ಲಭ್ಯ.ಹೆಣ್ಣುಮಕ್ಕಳು ಮೆಚ್ಚುವ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ವಿವಿಧ ಬಗೆಯ ದಿರಿಸುಗಳ ದೊಡ್ಡ ಸಂಗ್ರಹವೇ ಇದೆ.
ಮಕ್ಕಳ ವಿಭಾಗದಲ್ಲಿ ಆಟಿಕೆಗಳ ದೊಡ್ಡ ಪ್ರಪಂಚವೇ ತೆರೆದುಕೊಳ್ಳಲಿದೆ. ಕಣ್ಣಿಗೊಪ್ಪುವ, ಮನಕ್ಕೆ ಹಿತ ನೀಡುವ ನೂರಾರು ಬಗೆಯ ಆಟಿಕೆಗಳು ಮಕ್ಕಳ ಮನಸ್ಸು ಗೆಲ್ಲುವಂತಿವೆ. ಕುರುಕಲು ತಿನಿಸುಗಳ ವಿಭಾಗ ಕೂಡ ಇದ್ದು, ಆಹಾರಪ್ರಿಯರಿಗೆ ಇಷ್ಟವಾಗಬಹುದು.
ಅತ್ಯಾಕರ್ಷಕ ಕೃತಕ ಆಭರಣಗಳು, ರಾಜಸ್ಥಾನಿ ಮೊಜಾಡಿ, ಬನಾರಸ್ ಸೀರೆಗಳು, ಬಾಂಧನಿ ಸೀರೆ ಹಾಗೂ ಕಲಾಕೃತಿಗಳು, ಲಖನೌ ಚಿಕಾನ, ಪಶ್ಚಿಮ ಬಂಗಾಳದ ಕಾಂತಾ ಸಾರಿ, ಬೆಡ್‌ಶೀಟ್‌ಗಳು, ಕಾಶ್ಮೀರಿ ಡ್ರೆಸ್ ಮಟೀರಿಯಲ್‌ಗಳು, ರಾಜಸ್ಥಾನಿ ಬಳೆಗಳು, ಪೀಠೋಪಕರಣಗಳು, ಕರಕುಶಲ ವಸ್ತುಗಳು, ಕೈಮಗ್ಗದ ವಸ್ತುಗಳು ಒಂದೇ ಸೂರಿನಡಿ ಲಭ್ಯ ಇವೆ’ ಎಂದು ನ್ಯೂ ಕಲಾ ದರ್ಶನ ಮಾರಾಟ ಮೇಳದ ವ್ಯವಸ್ಥಾಪಕ ಅಮೀರ್ ಅಲಿ ತಿಳಿಸಿದ್ದಾರೆ.
‘ಮನೆಯನ್ನು ಅಲಂಕರಿಸಲು ಬೇಕಾಗುವ ಅತ್ಯಾಕರ್ಷಕ ವಿನ್ಯಾಸ ಹಾಗೂ ವೈವಿಧ್ಯಮಯ ವಸ್ತುಗಳ ದೊಡ್ಡ ಸಂಗ್ರಹ ಇದೆ. ದಸರಾ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಭೇಟಿ ನೀಡುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ 10.30ರಿಂದ ರಾತ್ರಿ 9.30ರವರೆಗೆ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಪ್ರವೇಶ ಉಚಿತವಾಗಿದೆ’ ಎಂದು ತಿಳಿಸಿದ್ದಾರೆ.
