ಉದಯವಾಹಿನಿ, ರಾಮನಗರ: ವಂಡರ್‌ಲಾ ಆನ್‌ಲೈನ್ ಟಿಕೆಟ್‌ಗೆ ದಸರಾ ಪ್ರಯುಕ್ತ ವಿಶೇಷ ಕೊಡುಗೆ ಘೋಷಿಸಲಾಗಿದೆ. ಆನ್‌ಲೈನ್‌ನಲ್ಲಿ ಎರಡು ಟಿಕೆಟ್ ಖರೀದಿಸಿದರೆ ಒಂದು ಟಿಕೆಟ್ ಉಚಿತವಾಗಿ ನೀಡಲಾಗುತ್ತದೆ. ಅ. 10ರವರೆಗೆ ಈ ಕೊಡುಗೆಗಳು ಲಭ್ಯವಿರಲಿದ್ದು, ಈ ಅವಧಿಯಲ್ಲಿ ಖರೀದಿಸಿದ ಟಿಕೆಟ್‌ಗಳು ಅ. 31ರವರೆಗೆ ಬಳಕೆಗೆ ಮಾನ್ಯವಾಗಿರುತ್ತವೆ.ದಸರಾ ರಜೆಯ ಅಂಗವಾಗಿ ವಂಡರ್‌ಲಾ ಸಮಯ ಹಾಗೂ ಮೋಜಿನ ಆಟದಲ್ಲಿಯೂ ಬದಲಾವಣೆ ಮಾಡಲಾಗಿದ್ದು, ಸಂಜೆ 7ರವರೆಗೆ ಪಾರ್ಕ್ ತೆರೆದಿರಲಿದೆ. ರೋಮಾಂಚಕ, ಅತ್ಯಾಕರ್ಷಕ ಡಿಜೆ ಪ್ರದರ್ಶನ, ಉತ್ಸಾಹಭರಿತ ಜುಂಬಾ ಸೆಷನ್‌ಗಳು, ಬೆರಗುಗೊಳಿಸುವ ಫೈರ್ ಶೋ ಪ್ರದರ್ಶನ, ವಯೊಲಿನ್ ಫ್ಯೂಶನ್ ಮತ್ತು ಲಿಕ್ವಿಡ್ ಡ್ರಮ್ ಪ್ರದರ್ಶನವೂ ಇರಲಿದೆ.
