ಉದಯವಾಹಿನಿ,ಕಲಬುರಗಿ: ತಾಲ್ಲೂಕಿನ ಪಾಳಾ ಗ್ರಾಮದ ದತ್ತಾತ್ರೇಯ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ದೇವಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಪ್ರತಿವರ್ಷದಂತೆ ಈ ವರ್ಷ ಕೂಡ ಗುತ್ತೇದಾರ ಪಾರಿವಾರದಿಂದ ತಾಯಿಯ ವಿಶೇಷ ಪೂಜೆ ಹಾಗೂ ಅನ್ನ ದಾಸೋಹ ಸೇವೆ ಏರ್ಪಡಿಸಲಾಗಿತ್ತು.
ಅಪಾರ ಭಕ್ತರ ಶ್ರದ್ಧೆಯ ಕೇಂದ್ರವಾಗಿದೆ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ಪೂಜೆ, ಭಜನೆ ನಡೆಯುತ್ತದೆ. ಪ್ರತಿದಿನ ಗ್ರಾಮದ ಒಂದೊಂದು ಕುಟುಂಬದವರು ಅನ್ನ ದಾಸೋಹ ಸೇವೆ ಹಾಗೂ ಆ ದಿನದ ಸೀರೆ ತೊಡಿಸಿ ಸಂಭ್ರಮಿಸುತ್ತಾರೆ.
ಅದೇ ರೀತಿ ಚಂದಯ್ಯ ಗುತ್ತೇದಾರ ಪಾಳಾ ಕಾಶೀನಾಥ್ ಗುತ್ತೇದಾರ ಸಂಜಯ್ಯ ಗುತ್ತೇದಾರ ರವರು ಅನ್ನ ದಾಸೋಹ ಹಾಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಯುವಕರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರು ಭಾಗಿಯಾಗಿದ್ದರು.
