ಉದಯವಾಹಿನಿ, ಕಲಬುರಗಿ: ಕೈದಿಗಳಿಗೆ ಗಾಂಜಾ ಮತ್ತು ಮೊಬೈಲ್ ಬಳಕೆಗೆ ಅವಕಾಶ ನೀಡುವ ಮೂಲಕ ರಾಜಾತಿಥ್ಯದ ಅವಕಾಶ ಕಲ್ಪಿಸಿದ್ದ ಕಲಬುರಗಿ ಸೆಂಟ್ರಲ್ ಜೈಲಿನ ಮೇಲೆ ಪೊಲೀಸರು ನಡೆಸಿದ ನಾಲ್ಕು ತಾಸಿನ ದಾಳಿ ಮುಕ್ತಾಯಗೊಂಡಿದೆ.ಪೊಲೀಸ್ ಕಮಿಷನರ್ ಶರಣಪ್ಪ ಡಘೆ ಹಾಗೂ ಡಿಸಿಪಿ ಕನ್ನಿಕಾ ಸಿಕ್ರಿವಾಲ್ ನೇತೃತ್ವದಲ್ಲಿ ಹತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ 60ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ದಿಢೀರ್ ದಾಳಿ ನಡೆಸಿ ಕೈದಿ ಸಾಗರ್ ಬಳಿಯಿದ್ದ ಎರಡು ಮೊಬೈಲ್ ಹಾಗೂ ಒಂದು ಕಬ್ಬಿಣದ ರಾಡು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ, ಬೀಡಿ , ಸಿಗರೇಟ್ , ಗುಟ್ಕಾ ಪ್ಯಾಕೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಾಳಿಯ ಕುರಿತು ವಿವರ ನೀಡಿದ ಪೊಲೀಸ್ ಕಮಿಷನರ್ ಶರಣಪ್ಪ ಡಘೆ, ವಿಡಿಯೋ ಕರೆ ಮಾಡಿ ಮಾತನಾಡಿದ ಮೊಬೈಲ್ ಪೋನ್ ಕೂಡ ವಶ ಪಡಿಸಿಕೊಳ್ಳಲಾಗಿದೆ.
ಬೆಳಗ್ಗೆ ವಿಚಾರಣಾಧೀನ ಖೈದಿಗಳಾದ ವಿನೋದ್ , ಸಾಗರ್ , ಸೋನು ವಿಚಾರಣೆ ನಡೆಸಲಾಗಿದೆ ಎಂದಿದ್ದಾರೆ. ನಾಲ್ಕು ಗಂಟೆಗೂ ಹೆಚ್ಚಿನ ಕಾಲ ಜೈಲಿನಲ್ಲಿ ತಪಾಸಣೆ ನಡೆಸಿದ ಬಳಿಕ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
