ಉದಯವಾಹಿನಿ, ವಿಜಯಪುರ : ವಿಜಯಪುರಕ್ಕೆ ಸಾಬರು ಎಂಎಲ್‍ಎ ಆಗುತ್ತಾರೆ ಎಂದು ಹೇಳುವ ವಕ್ಫ್ ಸಚಿವ ಜಮೀರ್ ಅಹ್ಮದ್ ತಾಕತ್ತು ಇದ್ದರೆ ತಾನೇ ಬಂದು ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸವಾಲು ಹಾಕಿದರು.
ಕಾನೂನು ಬಾಹಿರವಾಗಿ ವಕ್ಫ್ ಆಸ್ತಿ ಎಂದು ನಮೂದಿಸುವ ಪ್ರಯತ್ನ ವಿರೋಧಿಸಿ ಮಂಗಳವಾರ ನಗರದ ಸಿದ್ದೇಶ್ವರ ದೇವಸ್ಥಾನದ ಎದುರು ಹಮ್ಮಿಕೊಂಡ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳು, ಪೆÇಲೀಸರು ಸಹ ಹೆದರಬೇಡಿ, ಟ್ರಾನ್ಸಫರ್ ಮಾಡುತ್ತಾರೆ ಹೊರತು ಏನೂ ಮಾಡಲು ಸಾಧ್ಯವಿಲ್ಲ, ಹಿಂದೂ ಸಮಾಜಕ್ಕೆ ಅನ್ಯಾಯವಾದಾಗ ನೀವು ಹೆದರಬೇಡಿ, ಇನ್ನೂ ಎರಡು ವರ್ಷಗಳಲ್ಲಿ ಈ ಸರ್ಕಾರ ಪತನ ನಿಶ್ಚಿತ. ಯಾವ ಪಿಎಸ್‍ಐ ಗಣಪತಿ ಮೂರ್ತಿಯನ್ನು ಪೆÇಲೀಸ್ ವ್ಯಾನ್ನಲ್ಲಿ ತೆಗೆದುಕೊಂಡು ಹೋಗಿದ್ದಾನೋ ಅವನ ಮುಂದೆಯೇ ಮೆರವಣಿಗೆ ಕರೆದುಕೊಂಡು ಹೋಗೋಣ ಎಂದರು.
ವಕ್ಫ್ ಆಸ್ತಿ ಹೊಡೆದುಕೊಂಡವರಲ್ಲಿ ಮಲ್ಲಿಕಾರ್ಜುನ ಖರ್ಗೆ, ರೆಹಮಾನ್ ಖಾನ್, ಎನ್.ಎ. ಹ್ಯಾರೀಸ್ ಸೇರಿದಂತೆ ಅನೇಕ ಮುಸ್ಲಿಂ ನಾಯಕರು ಶಾಮೀಲಾಗಿದ್ದಾರೆ ಎಂದರು.
ವಕ್ಫ್ ಕಾನೂನಿನ ಕೈ ಕಡಿಯುವ ಕೆಲಸ ವಿಜಯಪುರದಿಂದಲೇ ಆರಂಭವಾಗಲಿ, ಯಾರಾದರೂ ನಿಮ್ಮ ಜಮೀನು ಕಬಳಿಸಲು ಬಂದರೆ ಧೈರ್ಯವಾಗಿ ಎದುರಿಸಬೇಕು ಎಂದರು.
ವಕ್ಫ್ ಅನ್ಯಾಯದ ಬಗ್ಗೆ ಈ ಭಾಗದ ಒಬ್ಬನೇ ಒಬ್ಬ ಕಾಂಗ್ರೆಸ್ ಶಾಸಕ ಮಾತನಾಡುತ್ತಿಲ್ಲ, ಹೀಗಾಗಿ ಈ ಎಲ್ಲರ ಆಸ್ತಿಯನ್ನೇ ವಕ್ಫ್‍ಗೆ ವರ್ಗಾಯಿಸಬೇಕು. ವಕ್ಫ್ ಬಗ್ಗೆ ಮಾತನಾಡಲು ಒಬ್ಬ ಎಂಎಲ್‍ಎಗೂ ಧಮ್ ಇಲ್ಲವೇ ಎಂದು ಗುಡುಗಿದರು.
ಜಿಲ್ಲಾಧಿಕಾರಿ ಕಚೇರಿ, ಪೆÇಲೀಸ್ ಕೇಂದ್ರ ಕಚೇರಿ, ಜಿಲ್ಲಾ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದೊಡ್ಡ ಜಮೀನನ್ನು ಹಿಂದಿನ ಡಿಸಿ ಮೊಹ್ಮದ್ ಮೊಹಸೀನ್ ವಕ್ಫ್‍ಗೆ ವರ್ಗಾಯಿಸಿದ್ದಾರೆ. ಹಿಂದುಳಿದವರು, ದಲಿತರು, ಬಡವರಿಂದ ಹಿಂದೂತ್ವದ ಹೋರಾಟ ಉಳಿದಿದೆ, ಶ್ರೀಮಂತ ಹಿಂದೂಗಳು ಹೋರಾಟಕ್ಕೆ ಬಾರದಿದ್ದರೂ ಸಹ ಹೋರಾಟಕ್ಕೆ ಶಕ್ತಿ ತುಂಬುವ ಕೆಲಸವನ್ನಾದರೂ ಮಾಡಬೇಕು. ಹಿಂದೂಪರ ಮಾತನಾಡುವ ಎಲ್ಲ ರಾಜಕಾರಣಿಗಳು ಒಂದಾಗಬೇಕು ಎಂದರು.
