ಉದಯವಾಹಿನಿ,ದೇವದುರ್ಗ: ತಮಿಳುನಾಡ ರಾಜ್ಯದ ಲಾರಿಯೊಂದು ರವಿವಾರ ಬೆಳಿಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ರಕ್ಷಣೆಯ ಕಬ್ಬಿಣದ ಮೇಟ್ಟಲಿಗೆ ತಗಲಿದ್ದಿರಿಂದ ಡ್ಯಾಮೇಜ್ ಆದ್ದರಿಂದ ಸ್ಥಳಕ್ಕೆ ದಲಿತ ಪರ ಮುಖಂಡರು ದೌಢಾಯಿಸಿ ಶಾಂತಿಯುತ ಪ್ರತಿಭಟನೆ ನಡೆಸಿದರು. ಚಾಲಕ ಸೇರಿ ಲಾರಿಯನ್ನು ಪೊಲೀಸ್ ಠಾಣೆಗೆ ಕರೆದ್ಯೂಯಲಾಯಿತು. ಸಿಸಿಕ್ಯಾಮರಾ, ಪುತ್ಥಳಿ ಮುಂಭಾಗದಲ್ಲಿ ತರಕಾರಿ ಮಾರದಂತೆ, ಪೊಲೀಸ್ ಸಿಬ್ಬಂದಿ ನಿಯೋಜನೆ ಸೇರಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಮುಖಂಡರು ತಹಶೀಲ್ದಾರ ಶ್ರೀನಿವಾಸ ಚಾಪಲ್‍ಗೆ ಮನವಿ ಸಲ್ಲಿಸಿದರು. ಛಲವಾದಿ ಮಹಾಸಭಾ ತಾಲೂಕಾಧ್ಯಕ್ಷ ಚಿದಾನಂದಪ್ಪ ಶಿವಂಗಿ ಮಾತನಾಡಿ, ಈಗಾಗಲೇ ಹಲವು ಬಾರಿ ತಾಲೂಕ ಆಡಳಿತಕ್ಕೆ ಮನವಿ ಮಾಡಲಾಗಿದೆ. ಸಣ್ಣಪುಟ್ಟ ಘಟನೆಗಳು ನಡೆದರೂ ಅಧಿಕಾರಿಗಳು ಎಚ್ಚತ್ತಗೊಳ್ಳುತ್ತಿಲ್ಲ ಎಂದು ದೂರಿದರು. ಹೈಮಾಸ್ ದೀಪ್, ಸಿಸಿಕ್ಯಾಮರಾ, ಪೊಲೀಸ್ ಸಿಬ್ಬಂದಿ ನಿಯೋಜಿಸಿ ಪುತ್ಥಳಿ ಪಕ್ಕದಲ್ಲಿ ಬ್ಯಾನರ್ ಅಳವಡಿಕೆ ಮಾಡದಂತೆ ತಹಶೀಲ್ದಾರ ಗಮನಕ್ಕೆ ತಂದರೂ. ಪದೇ ಪದೆ ಘಟನೆಗಳು ನಡೆಯುತ್ತಿದ್ದರಿಂದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ದೂರಿದರು. ಮನವಿ ಪತ್ರದಲ್ಲಿ ಸಲ್ಲಿಸಿರುವ ಹಲವು ಬೇಡಿಕೆಗಳು ವಾರದಲ್ಲಿ ಕ್ರಮಕೈಗೊಳ್ಳದೇ ಇದ್ದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ರೋಕ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಎನ್.ಲಿಂಗಪ್ಪ, ಹನುಮಂತಪ್ಪ ಮನ್ನಾಪುರಿ, ನರಸಪ್ಪ ಚಿಂಚೋಡಿ ವಕೀಲ, ಮಲ್ಲಿಕಾರ್ಜುನ ಮಸರಕಲ್, ಮಲ್ಲೇಶಪ್ಪ ಹುನುಗುಂದಬಾಡ್, ಮಹಾಂತೇಶ ಭವಾನಿ, ರಂಗನಾಥ ಕೊಂಬಿನ್, ನಲ್ಲರೆಡ್ಡಿ ಗಬ್ಬೂರು, ತಮ್ಮಣ್ಣ ವಕೀಲ, ಶಿವರಾಯ ಅಕ್ಕರಕಿ, ಮೋಹನ್, ವಿಶ್ವ ಅಕ್ಕರಕಿ, ಯಲ್ಲಪ್ಪ ಆಲ್ದರ್ತಿ, ಮಹಾಲಿಂಗ ದೊಡ್ಡಮನಿ, ಯಲ್ಲಪ್ಪ ಜಾಲಹಳ್ಳಿ, ಹುಸೇನ್‍ಪ್ಪ ಜಾಲಹಳ್ಳಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!