ಉದಯವಾಹಿನಿ, ಬೀಳಗಿ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಇರುವವರೆಗೆ ಸರಕಾರ ನೀಡಿದ ಪಂಚ ಗ್ಯಾರಂಟಿಗಳು ನಿಲ್ಲುವುದಿಲ್ಲ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ, ಶಾಸಕ ಜೆ.ಟಿ.ಪಾಟೀಲ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯ ಆಡಳಿತ ಭವನದಲ್ಲಿ ತಾಲೂಕಾ ಮಟ್ಟದ ಗ್ಯಾರಂಟಿ ಅನುಷ್ಟಾನÀ ಪ್ರಾಧಿಕಾರ ಸಮಿತಿಯ ನೂತನ ಕಚೇರಿಯ ಪೂಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಸರಕಾರ ರಾಜ್ಯದ ಜನತೆಗೆ ಕೊಟ್ಟ ಭರವಸೆಯಂತೆ ನಡೆದುಕೊಂಡು ಇಂದು ಮಹಾತ್ವಾಂಕಾಂಕ್ಷೆಯ ಯೋಜನೆಗಳಲ್ಲಿ ಪಂಚ ಗ್ಯಾರಂಟಿಗಳನ್ನು ಸಮರ್ಪಕವಾಗಿ ನೀಡಿ ನಾಡಿನ ಜನತೆಯ ಆರ್ಥಿಕತೆಗೆ ಉಪಯೋಗಕಾರಿಯಾಗಿದೆ. ಸರಕಾರದ ಯೋಜನೆಗಳ ನೈಜ ಫಲಾನುಭವಿಗಳಿಗೆ ದೊರೆಯಬೇಕಾಗಿದೆ. ಇದರಿಂದ ಯಾರು ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಅಧ್ಯಕ್ಷರನ್ನು ಹಿಡಿದು ಎಲ್ಲ ಸದಸ್ಯರು ತಮಗೆ ನೀಡಿದ ಜವಾಬ್ದಾರಿಯನ್ನು ಪ್ರಮಾಣಿಕತೆಯಿಂದ ನಿಭಾಸಬೇಕು. ಇದರಿಂದ ಇನ್ನೂ ಹೆಚ್ಚು ಸಂಘಟನೆಗೆ ಬಲ ಬರಲಿದೆ. ಇಲ್ಲಿ ಯಾವುದೇ ಪಕ್ಷಪಾತ ನಡೆಯಕೂಡದು ಎಂದರು. ಬೀಳಗಿ ತಾಲೂಕಿನಲ್ಲಿ ಗೃಹ ಜ್ಯೋತಿಯಲ್ಲಿ 34356 ಕುಟುಂಬದವರು ಪ್ರತಿತಿಂಗಳ 200 ಯುನಿಟ್‍ವರೆಗೆ ಉಚಿತ ವಿದ್ಯುತ್. ಯುವ ನಿಧಿಯಲ್ಲಿ ಡಿಗ್ರಿ ಪದವಿಧರು 659 ಹಾಗೂ ಡಿಪ್ಲೋಮಾ 6 ಪದವಿಧರು. ಸಕ್ರಿಯೋಜನೆಯಲ್ಲಿ ಬೀಳಗಿ ಡಿಪೋ ಬಸ್ಸಿನಲ್ಲಿ ಒಂದು ವರ್ಷದಲ್ಲಿ 1ಕೋಟಿ 8ಲಕ್ಷ ಮಹಿಳೆಯರು, ಅನ್ನಭಾಗ್ಯ ಯೋಜನೆಯಲ್ಲಿ ಬಡವರಿಗೆ ಪ್ರತಿ ತಿಂಗಲ 10ಕೆಜಿ ಅಕ್ಕಿ, ಗೃಹ ಲಕ್ಷ್ಮೀ ಪ್ರತಿ ಮನೆಯೊಡತಿಗೆ 2000 ದಂತೆ 34157 ಫಲಾನುಭವಿಗಳು ಇದರ ಲಾಭವನ್ನು ಪಡೆದುಕೊಂಡಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!