ಉದಯವಾಹಿನಿ, ಬೀದರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಚನೆ ಮಾಡಲ್ಪಟ್ಟ ಸಾಮಾನ್ಯ ಸೇವಾ ಕೇಂದ್ರಗಳ ಸೇವಾದಾರರಿಗೆ ತರಬೇತಿ ಕಾರ್ಯಗಾರವನ್ನು ಬೀದರ ಜಿಲ್ಲಾ ಕಛೇರಿಯಲ್ಲಿ ಹಮ್ಮಿಕೊಳ್ಳಲಾಯಿತು.
ಬೀದರ ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಮಂಗಳಾ ಬಾಗವತ್ ಅವರು ಸಭೆಯನ್ನು ಉದ್ಘಾಟನೆ ಮಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಧರ್ಮಸ್ಥಳ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಒಂದು ಸರಕಾರದಂತೆ ಕಾರ್ಯನಿರ್ವಹಿಸುತ್ತಿದೆ ಜನರಿಗೆ ಬೇಕಾದ ಎಲ್ಲ ರೀತಿಯ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಹಾಗು ಬಡವರಿಗೆ ಬ್ಯಾಂಕಿನಿAದ ನೆರವು ನೀಡುವುದರೊಂದಿಗೆ, ಹಾಗೂ ಧರ್ಮಸ್ಥಳ ಕ್ಷೇತ್ರದಿಂದ ಸಮಾಜಕ್ಕೆ ಬೇಕಾದ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.

ಪ್ರಾಸ್ಥಾವಿಕವಾಗಿ ಜಿಲ್ಲೆಯ ಎಮ್.ಐ.ಎಸ್ ಯೋಜನಾಧಿಕಾರಿಗಳಾದ ಶೇಖರ್ ನಾಯ್ಕ್ ಅವರು ಮಾತನಾಡಿ, ಧರ್ಮಸ್ಥಳ ಸಂಸ್ಥೆಯ ಮೂಲಕ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಗ್ರಾಮಮಟ್ಟದಲ್ಲಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ ಎಂದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದಅವರು ಸರಕಾರ ಮತ್ತು ಕೇಂದ್ರ ಸರಕಾರಸ ಸೌಲಭ್ಯಗಳು ಪ್ರತಿಯೋಬ್ಬ ಜನರಿಗೆ ಉಚಿತವಾಗಿ ಮತ್ತು ಕಡಿಮೆ ದರದಲ್ಲಿ ಸಿಗುವಹಾಗೆ ಮಾಡಲಾಗುತ್ತಿದೆ ಎಂದರು.
ಸಿ.ಎಸ್.ಸಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದಗಣೇಶ್ ಅವರು ಮಾತನಾಡಿ ಧರ್ಮಸ್ಥಳ ಕ್ಷೇತ್ರದಿಂದ ಅನ್ನದಾನ, ಅಭಯದಾನ, ಆರೋಗ್ಯದಾನ ಮತ್ತು ಅಕ್ಷರದಾನಗಳನ್ನು ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ ಎಂದರು. ಗ್ರಾಮಮಟ್ಟದಲ್ಲಿ ಸಾಮಾನ್ಯ ಜನರು ಆರ್ಥಿಕವಾಗಿ ಅಭಿವೃದ್ಧಿ ಆಗಬೇಕು ಎಂದು ಈ ಹಿನ್ನಲೆಯಲ್ಲಿ ಪೂಜ್ಯರ ಕನಸಿನ ಕೂಸು ಗ್ರಾಮಾಭಿವೃದ್ಧಿ ಯೋಜನೆಯಾಗಿದೆ. ಈ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು ಇದರಲ್ಲಿ ಒಂದಾದ ಕಾರ್ಯಕ್ರಮ ಸಾಮಾನ್ಯ ಸೇವಾ ಕೇಂದ್ರ ರಚನೆ ಎಂದರು.

Leave a Reply

Your email address will not be published. Required fields are marked *

error: Content is protected !!