ಉದಯವಾಹಿನಿ, ಉಡುಪಿ: ಲೌಕಿಕ, ಪಾರಮಾರ್ಥಿಕ ಸತ್ಯವನ್ನು ಪ್ರತಿಪಾದಿಸುವ ಭಗವದ್ಗೀತೆ, ಸರ್ವಕಾಲದಲ್ಲೂ, ಸರ್ವವ್ಯಾಪಿಯಾಗಿರುವ ಏಕೈಕ ವಿಶ್ವಗ್ರಂಥವಾಗಿದೆ ಎಂದು ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಪ್ರಾಚ್ಯವಿದ್ಯಾ ಸಮ್ಮೇಳನದ ಮೊದಲ ಗೋಷ್ಠಿ ‘ಭಗವದ್ಗೀತೆ: ಸಾರ್ವತ್ರಿಕ ತತ್ವಶಾಸ್ತ್ರ’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಭಗವದ್ಗೀತೆ ಕೇವಲ ಮೋಕ್ಷ ಶಾಸ್ತ್ರವಲ್ಲ, ಲೌಕಿಕ, ಪಾರ ಲೌಕಿಕ, ಸರ್ವ ವೇದಗಳನ್ನು ಒಳಗೊಂಡಿರುವ ಗ್ರಂಥ. ವೈದ್ಯರು, ಎಂಜಿನಿಯರ್‌ಗಳು, ಪ್ರಾಧ್ಯಾಪಕರು ಹೀಗೆ ಎಲ್ಲ ಕ್ಷೇತ್ರಗಳಲ್ಲಿರುವವರು, ಜನ ಸಾಮಾನ್ಯರ ಸಮಸ್ಯೆಗಳಿಗೆ ಗೀತೆಯಲ್ಲಿ ಪರಿಹಾರ ಕಾಣಲು ಸಾಧ್ಯ. ಜೀವನ ಮೌಲ್ಯಗಳನ್ನು ಬೋಧಿಸುವ ಗೀತೆ, ಒಬ್ಬೊಬ್ಬರನ್ನೂ ಒಂದೊಂದು ವಿಧದಲ್ಲಿ ಸಂತೈಸುತ್ತದೆ. ಕೋಟಿ ಗೀತಾ ಯಜ್ಞದಲ್ಲಿ ಭಾಗವಹಿಸಿರುವವರ ಅನುಭವಗಳು ಇದನ್ನು ಸಾಕ್ಷೀಕರಿಸಿವೆ. ಗೀತೆಯ ಬಗೆಗಿನ ವ್ಯಾಖ್ಯಾನ, ಚಿಂತನ-ಮಂಥನ ನಿರಂತರವಾಗಿ ನಡೆಯಬೇಕು’ ಎಂದು ಆಶಿಸಿದರು.
ಅಂದರೆ, ಗೀತೆಯ ಸಂದೇಶ ಕೂಡ ತ್ಯಾಗದ ತಾತ್ಪರ್ಯವೇ ಆಗಿದೆ. ಧರ್ಮ ಮಾರ್ಗದ ಕಾಯಕದಲ್ಲಿ ನೈತಿಕತೆಯ ಪ್ರಜ್ಞೆಯನ್ನು ಗೀತೆ ಜಾಗೃತಗೊಳಿಸುತ್ತದೆ. ಗೀತಾ ಪಠಣದ ಅಭ್ಯಾಸದಿಂದ ಸಕಾರಾತ್ಮಕ ಚಿಂತನೆ ಆವಿರ್ಭವಿಸುತ್ತದೆ’ ಎಂದರು.

ಭಗವದ್ಗೀತೆಯಲ್ಲಿ ಭಾಗವತ ತತ್ವ ಅಡಕವಾಗಿರುವುದನ್ನು ಉದಾಹರಣೆಯೊಂದಿಗೆ ವಿವರಿಸಿದ ಪುತ್ತಿಗೆ ಮಠದ ಅಮೆರಿಕ ಶಾಖೆಯ ಆಸ್ಥಾನ ವಿದ್ವಾಂಸ ಕೇಶವ ರಾವ್ ತಾಡಿಪತ್ರಿ, ಭಕ್ತಿ ಮಾರ್ಗ ಅನುಸರಿಸಿ ಇಂದ್ರಿಯ ನಿಗ್ರಹ, ಮನಸ್ಸಿನ ನಿಯಂತ್ರಣದ ಮೂಲಕ ಪರತತ್ವ ಪಡೆಯಲು ಸಾಧ್ಯ. ಭಗವದ್ಗೀತೆ ಇದನ್ನೇ ಉಪದೇಶಿಸುತ್ತದೆ ಎಂದರು. ನಿವೃತ್ತ ಪ್ರಾಂಶುಪಾಲ ಸುಧೀರ್‌ ರಾಜ್ ಕೆ ಮಾತನಾಡಿ, ಜ್ಞಾನ ಖಣಿಯಾಗಿರುವ ಕೃಷ್ಣ ಕಾಲಾತೀತ ನಾಯಕ. ಹೃದಯಕ್ಕೆ ಹಿತ ನೀಡುವ ಕೃಷ್ಣನ ಭಾಷೆಯೇ ಸಂಗೀತದಂತೆ ಎಂದರು.

Leave a Reply

Your email address will not be published. Required fields are marked *

error: Content is protected !!