ಉದಯವಾಹಿನಿ, ಇದೀಗ ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದೇ ವೇಳೆಯಲ್ಲೇ ಅಡಿಕೆ ಬೆಲೆ ಇದೀಗ ಹೆಚ್ಚಾಗಿದ್ದು, ಇದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಹೆಚ್ಚಾದಂತಾಗಿದೆ. ಹಾಗಾದರೆ, ಎಷ್ಟು ಏರಿಕೆ ಆಗಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇದೀಹ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಡಿಕೆ ದರ ಹೆಚ್ಚಾಗಿದ್ದು, ಇದರಿಂದ ಬೆಳೆಗಾರರ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. ಕಳೆದ ಎರಡು ದಿನಗಳಿಂದ ಅಡಿಕೆ ದರ ಕ್ವಿಂಟಲ್‌ಗೆ 51,000 ರೂಪಾಯಿ ತಲುಪಿದೆ. ಒಂದು ವಾರದ ಹಿಂದೆ ಕ್ವಿಂಟಲ್ ಅಡಿಕೆ ದರ 41,000 ದಿಂದ 45,000 ರೂಪಾಯಿ ಆಸುಪಾಸಿನಲ್ಲಿತ್ತು. ಇದೀಗ ಹೆಚ್ಚಾಗಿರುವುದರಿಂದ ಬೆಳೆಗಾರರ ಮುಖದಲ್ಲಿ ಬೆಳಕಿನ ಕಳೆ ಹೆಚ್ಚಾದಂತಾಗಿದೆ.
ಬೆಳೆಗಾರರು ಅಡಿಕೆ ಮಾರಾಟ ಮಾಡಲು ಹಿಂದೇಟು ಹಾಕಿದ್ದರು. ಇದೀಗ ಅಡಿಕೆ ದರ 51,000 ರೂಪಾಯಿ ತಲುಪುತ್ತಿದ್ದಂತೆ ಬೆಳೆಗಾರರು ನಾಮುಂದು ತಾಮುಂದು ಎಂಬಂತೆ ಮಾರಾಟ ಮಾಡಲು ಮುಂದಾಗಿದ್ದಾರೆ. ಅದರಲ್ಲೂ ಚನ್ನಗಿರಿ ಭಾಗದಲ್ಲಿ ಸುಮಾರು 39,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಈ ಬಾರಿ ಉತ್ತಮ ಮುಂಗಾರು ಮಳೆ ಆಗಿರುವುದರಿಂದ ಅಡಿಕೆ ಬೆಳೆಗಾರರಿಗೆ ನೀರಿನ ಕೊರತೆ ಕಾಣುವುದಿಲ್ಲ. ಅಡಿಕೆ ಕೊಯ್ಲು ಮುಂದುವರೆದಿದ್ದು, ಇನ್ನೂ ಒಂದು ತಿಂಗಳ ಕಾಲ ನಡೆಯಲಿದೆ.
ಕಳೆದ ವರ್ಷಕ್ಕಿಂತ ಈ ಬಾರಿ ಇಳುವರಿ ಹೆಚ್ಚಾಗಿದ್ದು, ಕ್ವಿಂಟಲ್‌ಗೆ ಕನಿಷ್ಠ 43,299 ರೂಪಾಯಿ, ಗರಿಷ್ಠ 51,000 ರೂಪಾಯಿ, ಸರಾಸರಿ 49,407 ರೂಪಾಯಿ ದರ ಇದೆ. ಇದರಿಂದ ಬೆಳೆಗಾರತು ಅಡಿಕೆ ಮಾರಾಟ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಯಾಕೆಂದರೆ, ಅಡಿಕೆ ದರ ಯಾವಾಗ ಕಡಿಮೆ ಆಗುತ್ತೋ ಯಾವಾಗ ಜಾಸ್ತಿಯಾಗುತ್ತೋ ಹೇಳುವುದಕ್ಕೆ ಆಗುವುದಿಲ್ಲ. ಚಿನ್ನ, ಬೆಳ್ಳಿ ದರದಂತೆ ಏರಿಳಿತ ಆಗುತ್ತಿರುತ್ತದೆ.
