ಉದಯವಾಹಿನಿ, ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನ ಜಿಲ್ಲೆಯ ಅಧಿದೇವತೆ, ಹಾಸನಾಂಬೆ ದೇವಿಯ ದೇಗುಲದ ಬಾಗಿಲನ್ನು ಕಳೆದ ಶಾಸ್ತ್ರೋಕ್ತವಾಗಿ ತೆರೆಯಲಾಯಿತು. ತಾಯಿಯನ್ನು ಕಣ್ತುಂಬಿಕೊಳ್ಳಲು ಹಾಗೂ ತಮ್ಮ ಕುಟುಂಬದವರಿಗೆ ದರ್ಶನ ಮಾಡಿಸಲು ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಭಕ್ತಾಧಿಗಳು, ಬೆಳಗ್ಗಿನಿಂದಲೇ ದೇವಾಲಯದ ಮುಂದೆ ಊಹೆಗೂ ಮೀರಿದ ಸಂಖ್ಯೆಯಲ್ಲಿ ಹಾಜರಾಗುತ್ತಿದ್ದಾರೆ.
ಮಿತಿಮೀರಿದ ಭಕ್ತಾಧಿಗಳ ಸಂಖ್ಯೆಯನ್ನು ತಡೆಯುವಲ್ಲಿ ಪೊಲೀಸ್ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದು, ಜನಸಾಗರವನ್ನು ತಡೆಯಲು ಅಧಿಕಾರಿಗಳು ವಿಫಲರಾಗಿದ್ದಾರೆ. ಇದರಲ್ಲಿ ಪ್ರಮುಖವಾಗಿ ವಿವಿಐಪಿ ಪಾಸ್ ಮತ್ತು 300 ರೂ. ಟಿಕೆಟ್ ಪಾಸ್ಗಳ ಆರ್ಭಟ ಜೋರಾಗಿದ್ದು, ಇದರಿಂದಲೇ ಸಮಸ್ಯೆ ಉಲ್ಬಣಿಸುತ್ತಿದೆ ಎಂದು ಭಾವಿಸಿದ ಜಿಲ್ಲಾಡಳಿತ ಇದೀಗ ಮಹತ್ವದ ಸೂಚನೆಯನ್ನು ಹೊರಡಿಸಿದೆ.1000 ರೂ. ವಿವಿಐಪಿ ಪಾಸ್ ಹಾಗೂ 300 ರೂ.ಗಳ ಟಿಕೆಟ್ ಪಾಸ್ಗಳನ್ನು ಈ ಕೂಡಲೇ ರದ್ದುಗೊಳಿಸಿ ಎಂದು ಆದೇಶ ಹೊರಡಿಸಿರುವ ಜಿಲ್ಲಾಡಳಿತ, ಹೊರ ಜಿಲ್ಲೆಗಳಿಂದ ಏಕಾಏಕಿ ಭಕ್ತರ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ದಿಢೀರ್ ನಿರ್ಣಯ ಕೈಗೊಂಡಿದೆ.
