ಉದಯವಾಹಿನಿ, ಕೋಲ್ಕತ್ತಾ: ನಗರದ ವಿವಿಧ ಭಾಗಗಳಲ್ಲಿ ನಿಷೇಧಿತ ಪಟಾಕಿ ಸಿಡಿಸಿದ ಮತ್ತು ಅನೈತಿಕ ವರ್ತನೆಗೆ ಸಂಬಂಧಿಸಿದಂತೆ 292 ಜನರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲ 500 ಕೆಜಿಗೂ ಅಧಿಕ ನಿಷೇಧಿತ ಪಟಾಕಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಿನ್ನೆ ಕಾಳಿಪೂಜೆ ಮತ್ತು ದೀಪಾವಳಿಯನ್ನು ಆಚರಿಸಲಾಯಿತು, ಬಣ್ಣಬಣ್ಣದ ದೀಪಗಳು ಮತ್ತು ಅಲಂಕತವಾದ ಪಂಡಲ್‌ಗಳು ರಾಜ್ಯದಾದ್ಯಂತ ಹಬ್ಬದ ಉತ್ಸಾಹವನ್ನು ಸಷ್ಟಿಸಿದ್ದವು. ಕೋಲ್ಕತ್ತಾ ಪೊಲೀಸರು ನಿನ್ನೆ ಮಧ್ಯರಾತ್ರಿಯವರೆಗೆ ನಿಷೇಧಿತ ಪಟಾಕಿ ಸಿಡಿಸಿದ 117 ಜನರನ್ನು ಮತ್ತು ಅನೈತಿಕ ವರ್ತನೆಗಾಗಿ 175 ಜನರನ್ನು ಬಂಧಿಸಿದ್ದಾರೆ ಎಂದು ಅವರು ಹೇಳಿದರು.

ಈ ರೀತಿಯ ತಪಾಸಣೆ ಮತ್ತು ಬಂಧನವು ಇಂದಿಗೂ ಮುಂದುವರಿಯುತ್ತದೆ ಮತ್ತು ಅಂತಹ ಬೆದರಿಕೆಗಳ ಮೇಲೆ ನಿಗಾ ಇಡಲು ಒಂದೆರಡು ದಿನಗಳವರೆಗೆ ಇರಲಿದೆ ಎಂದು ಐಪಿಎಸ್‌‍ ಅಧಿಕಾರಿ ಪಿಟಿಐಗೆ ತಿಳಿಸಿದರು. ಕೋಲ್ಕತ್ತಾ ಪೊಲೀಸರು 292 ಜನರನ್ನು ಬಂಧಿಸಿದ್ದಾರೆ ಮತ್ತು ನಗರದ ವಿವಿಧ ಭಾಗಗಳಿಂದ ಸುಮಾರು 4,000 ಕೆಜಿ ನಿಷೇಧಿತ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!