ಉದಯವಾಹಿನಿ, ಹಾಸನ: ವರ್ಷಕ್ಕೊಮೆ ದರ್ಶನ ಭಾಗ್ಯ ನೀಡುವ ನಗರದ ಅಧಿದೇವತೆ ಹಾಸನಾಂಬ ದೇವಿಯ ಈ ವರ್ಷದ ದರ್ಶನಕ್ಕೆ ಇಂದು ವಿಶ್ವರೂಪ ದರ್ಶನದ ಬಳಿಕ ಶಾಸೊ್ತ್ರೕಕ್ತವಾಗಿ ಪೂಜೆ ಸಲ್ಲಿಸಿ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು. ಶಾಸಕ ಸ್ವರೂಪ್‌ಪ್ರಕಾಶ್‌ . ಜಿಲ್ಲಾಧಿಕಾರಿ ಸತ್ಯಭಾಮ, ಎಸ್‌‍,ಪಿ ಮಹಮದ್‌ ಸುಜೆತಾ , ಉಪವಿಭಾಗಾಧಿಕಾರಿ ಮಾರುತಿ ಸೇರಿದಂತೆ ಮತ್ತಿತರ ಗಣ್ಯರ ಸಮುಖದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು.
ಅ.24ರಂದು ದೇವಾಲಯದ ಗರ್ಭಗಡಿಯ ಬಾಗಿಲನ್ನು ತೆರೆಲಾಗಿದ್ದು ನ.2ರವರೆಗೂ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು ಪ್ರತಿ ನಿತ್ಯ ರಾಜ್ಯದ ವಿವಿದ ಜಿಲ್ಲೆಗಳಿಂದ ಸಾಗರೋಪಾದಿಯಲ್ಲಿ ಭಕ್ತರು ಬಂದು ದೇವಿಯ ದರ್ಶನ ಪಡೆದು ಈ ಬಾರಿ ಇತಿಹಾಸ ನಿರ್ಮಿಸಿದ್ದಾರೆ. ಸುಮಾರು 20 ಲಕ್ಷ ಮಂದಿ ದರ್ಶನ ಪಡೆದಿದ್ದು ಸಾವಿರ ಹಾಗೂ 300 ರೂ ಮುಖಬೇಲೆಯ ಟಿಕೇಟ್‌, ಲಾಡು , ಸೀರೆ ಮಾರಾಟದಿಂದ ಬರೊಬ್ಬರಿ 9 ಕೋಟಿ ರೂ. ಆದಾಯ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕರ ದರ್ಶನಕ್ಕೆ ಇಂದು ಅಂತ್ಯವಾದರೂ ಸಹ ಇಂದು ಜನರು ದೇವಿಯ ದರ್ಶನ ಪಡೆಯಲು ಕೆಲವರು ಯತ್ನಿಸಿದ್ದಾರೆ ದೇವಾಲಯದ ಕಾಪೌಂಡ್‌ ಹತ್ತಿ ದೇವಾಲಯದ ಆವರಣದೊಳಗೆ ಪ್ರವೇಶಿಸಲು ಯತ್ನಿದ್ದು ದೇವಾಲಯದ ಹೊರಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.

Leave a Reply

Your email address will not be published. Required fields are marked *

error: Content is protected !!