ಉದಯವಾಹಿನಿ, ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೆತ್ರದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ 8 ದಿನ ಬಾಕಿ ಇದ್ದು. ಚುನಾವಣಾ ಪ್ರಚಾರದ ಕಾವು ಹೆಚ್ಚತೊಡಗಿದೆ. ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ. ಉಳಿದಂತೆ ನಾಲ್ಕು ಜನರು ಪಕ್ಷೇತರರಿದ್ದು ಅವರು ಪ್ರಚಾರದಲ್ಲಿ ಹೆಚ್ಚಾಗಿ ಕಾಣಿಸುತ್ತಿಲ್ಲ. ದೀಪಾವಳಿ ಹಬ್ಬದ ಅಂಗವಾಗಿ ಒಂದಿಷ್ಟು ಕಡಿಮೆಯಾಗಿದ್ದ ಪ್ರಚಾರ ಕಾರ್ಯ ಇಂದಿನಿಂದ ಬಿರುಸು ಪಡೆಯಲಿದೆ.
ಇಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಪರವಾಗಿ ಬಿಜೆಪಿಯ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಯುವ ಸಮಾವೇಶ ನಡೆಸಿ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಒಂದು ಕೋಮಿನ ತುಷ್ಟೀಕರಣಕ್ಕಾಗಿ ತಲಾ ತಲಾಂತರದಿಂದ ಬಂದ ರೈತರ ಜಮೀನನ್ನು ವಕ್ಪ್ ಗೆ ಸೇರಿದ್ದು ಎಂದು ರೈತರನ್ನು ವಕ್ಕಲೆಬ್ಬಸಲು ಮುಂದಾಗಿದೆ. ಸಧ್ಯ ಇದನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದರೂ ಚುನಾವಣೆ ನಂತರ ಮುಂದುವರೆಯುವ ಸಾಧ್ಯತೆ ಇದೆ.
