ಉದಯವಾಹಿನಿ, ಹುಬ್ಬಳ್ಳಿ: ನಾಡಿನ ಪ್ರತಿಷ್ಠಿತ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಹುಬ್ಬಳ್ಳಿ ತಾಲೂಕಿನ ಮಂಟೂರು ಶ್ರೀ ಅಡವಿ ಸಿದ್ಧೇಶ್ವರ ಹಾಗೂ ಸೊರಬ ತಾಲೂಕಿನ ಗೇರಕೊಪ್ಪ ಇಂಧುದರೇಶ್ವರ ಮಠದ ಪೀಠಾಪತಿ ಶಿವಲಿಂಗೇಶ್ವರ ಶ್ರೀಗಳ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ನಂತರ ಮಠಕ್ಕೆ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸದ್ಯ ಭಕ್ತಗಣ ಶ್ರೀಗಳು ಗುಣಮುಖರಾಗಲೆಂದು ಪ್ರಾರ್ಥಿಸುತ್ತಿದ್ದಾರೆ.
ಹೌದು, ಹುಬ್ಬಳ್ಳಿ ತಾಲೂಕಿನ ಮಂಟೂರು ಶ್ರೀ ಅಡವಿ ಸಿದ್ಧೇಶ್ವರ ಹಾಗೂ ಸೊರಬ ತಾಲೂಕಿನ ಗೇರಕೊಪ್ಪ ಇಂಧುದರೇಶ್ವರ ಮಠದ ಪೀಠಾಪತಿ ಶಿವಲಿಂಗೇಶ್ವರ ಶ್ರೀಗಳಿಗೆ ಇತ್ತೀಚೆಗೆ ಹೃದಯಾಘಾತವಾಗಿದೆ. ಐದು ದಿನಗಳಿಂದ ಅವರು ನಗರದ ತತ್ವದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದರ ಮಧ್ಯೆ ಆಸ್ಪತ್ರೆ ಆವರಣದಲ್ಲಿ ಭಕ್ತರ ಕೋರಿಕೆ ಮೇರೆಗೆ , ಸ್ವಾಮೀಜಿಯವರ ಸಮ್ಮುಖದಲ್ಲಿ ಮಂತ್ರ ಪಠಣದೊಂದಿಗೆ ಸಾಂಕೇತಿಕವಾಗಿ ಅಡವಿಸಿದ್ಧೇಶ್ವರ ಮಠದ ಉತ್ತರಾಕಾರಿಯಾಗಿ ‘ಇಂಧುಧರ ಶ್ರೀ’ಗಳನ್ನು ಉತ್ತರಾಧಿಕಾರಿ ನೇಮಕ ಮಾಡಲಾಯಿತು.
