ಉದಯವಾಹಿನಿ, ಬೆಂಗಳೂರು: ಹೊಸ ಮೊಬೈಲ್ ಕೊಡಿಸು ಇಲ್ಲವೇ ಮನೆಯಲ್ಲಿದ್ದ ಹಳೆಯ ಮೊಬೈಲ್ ರಿಪೇರಿ ಮಾಡಿಸು ಎಂದು ಹಠ ಮಾಡಿದ ೧೪ ವರ್ಷದ ಮಗನನ್ನು ನಿಷ್ಕರುಣಿ ತಂದೆ, ಮಗನ ಮೇಲೆ ಹಲ್ಲೆ ಮಾಡಿ ಕೊಲೆ ಅಮಾನುಷ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಕಾಶಿನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಕಾಶಿನಗರದ ತೇಜಸ್ (೧೪) ತಂದೆಯಿಂದ ಕೊಲೆಯಾದ ಮಗನಾಗಿದ್ದು,ಕೃತ್ಯ ನಡೆಸಿದ ಆರೋಪಿ ತಂದೆ ರವಿಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಮಗನನ್ನೇ ಹೊಡೆದು ಕೊಲೆ ಮಾಡಿದ ಘಟನೆಗೆ ಕಾರಣ ಕೇಳಿದರೆ, ಇಷ್ಟು ಸಣ್ಣ ವಿಚಾರಕ್ಕೆ ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಅಗತ್ಯವಿತ್ತಾ ಎಂಬ ಪ್ರಶ್ನೆಯೂ ಮೂಡುತ್ತದೆ. ಆದರೆ, ಇಲ್ಲಿ ಮಗನ ಜೀವ ತೆಗೆದಿದ್ದು ಸಣ್ಣ ವಿಚಾರ ಮಾತ್ರವಲ್ಲ ಮದ್ಯ ಸೇವನೆ ಅಮಲಿನಲ್ಲಿ, ಕೋಪದ ಕೈಗೆ ಬುದ್ಧಿ ಕೊಟ್ಟು ಮನಸೋ ಇಚ್ಛೆ ಹಲ್ಲೆ ಮಾಡಿದ್ದರಿಂದಲೇ ಇಲ್ಲಿ ಮಗನ ಪ್ರಾಣಪಕ್ಷಿ ಹಾರಿ ಹೋಗಿದೆ.
ಆರೋಪಿ ರವಿ ಕುಮಾರ್ ಮರಗೆಲಸ ಮಾಡುತ್ತಾ ಬಂದ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದನು.ಆದರೆ, ಅಪ್ಪನಿಗೆ ಪ್ರತಿನಿತ್ಯ ಒಂದೊಂದೇ ಬೇಡಿಕೆ ಇಡುತ್ತಿದ್ದ ಮಗನಿಂದ ಅಪ್ಪನಿಗೆ ಬೇಸರ ಉಂಟಾಗುತ್ತಿತ್ತು. ಆದರೆ, ಇತ್ತೀಚೆಗೆ ಅಪ್ಪಾ.. ನನ್ನ ಎಲ್ಲ ಫ್ರೆಂಡ್ಸ್ ಬಳಿ ಮೊಬೈಲ್ ಇದೆ. ನೀನು ನನಗೆ ಹೊಸ ಫೋನ್ ಕೊಡಿಸು ಎಂದಿದ್ದಾನೆ. ನಿನಗೆ ಹೊಸ ಫೋನ್ ಕೊಡಿಸಲು ಆಗದಿದ್ದರೆ, ಮನೆಯಲ್ಲಿ ಒಂದು ಹಳೆಯ ಫೋನ್ ಇದೆಯಲ್ಲ ಅದನ್ನಾದರೂ ರಿಪೇರಿ ಮಾಡಿಸಿ ಕೊಡು ಎಂದು ಕೇಳಿದ್ದಾನೆ.
