ಉದಯವಾಹಿನಿ, ರಾಯಚೂರು: ಕಾರ್ತೀಕ ಶುದ್ಧ ಪೌರ್ಣಮಿಯ ಪ್ರಯುಕ್ತ ಮಂತ್ರಾಲಯದ ತುಂಗಭದ್ರಾ ನದಿ ದಡದಲ್ಲಿ ಶುಕ್ರವಾರ ಸಂಜೆ ತುಂಗಾರತಿ ನಡೆಯಿತು.
ನಂತರ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪ್ರಾಂಗಣದಲ್ಲಿ ಲಕ್ಷದೀಪೋತ್ಸವ ನಡೆಸಲಾಯಿತು.ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ನೇತೃತ್ವದಲ್ಲಿ ಭಕ್ತರು ದೀಪೋತ್ಸವದಲ್ಲಿ ಪಾಲ್ಗೊಂಡು ಕೃತಾರ್ಥರಾದರು.
