ಉದಯವಾಹಿನಿ, ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಕೆಎಲ್‌ಇ ಐಟಿಯಿಂದ ವಿಆರ್ಎಲ್ (VRL) ಹುಬ್ಬಳ್ಳಿ ಹಾಫ್ ಮ್ಯಾರಥಾನ್ 21.1 ಕಿ.ಮೀ. ಓಟಕ್ಕೆ ವಿಜಯಾನಂದ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್ ಎಂ.ಡಿ. ಶಿವಾ ಸಂಕೇಶ್ವರ ಭಾನುವಾರ ಬೆಳಗ್ಗೆ ಚಾಲನೆ ನೀಡಿದರು.
ಅಳಗುಂಡಗಿ ಇಂಡಸ್ಟ್ರೀಸ್ನ ಜಯಕುಮಾರ ಅಳಗುಂಡಗಿ, ಶ್ವೇತಾ ಅಳಗುಂಡಗಿ, ಹುಬ್ಬಳ್ಳಿ ಫಿಟ್ ನೆಸ್ ಫೌಂಡೇಷನ್ ಚೇರಮನ್ ಡಾ.
ಎಸ್. ಪಿ. ಬಳಿಗಾರ, ವೈಸ್ ಚೇರ್ಮನ್ ಡಾ. ಜಿ.ಸಿ. ಪಾಟೀಲ, ದೇಶಪಾಂಡೆ ಫೌಂಡೇಷನ್ ಸ್ಕಿಲ್ಲಿಂಗ್ ನ ಸಿಇಒ ಪಿ.ಎನ್. ನಾಯಕ, ಡಾ. ಮಹೇಶ ಕುಮಾರ, ಇತರರು ಇದ್ದರು. ಮ್ಯಾರಥಾನ್ನಲ್ಲಿ ನೂರಾರು ಉತ್ಸಾಹಿಗಳು ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ಧಾರೆ.
