
ಉದಯವಾಹಿನಿ, ಗುಂಡ್ಲುಪೇಟ: ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಪ್ರವಾಸಿಗರ ಮುಂದೆ ಚಿರತೆಯೊಂದು ಜಿಂಕೆಯನ್ನು ಬೇಟೆಯಾಡಿರುವುದು ಸಫಾರಿ ಸಂದರ್ಭ ನಡೆದಿದ್ದು, ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ಬಂಡೀಪುರದ ಸಫಾರಿ ವಲಯದಲ್ಲಿ ಚಿರತೆಯೊಂದು ಜಿಂಕೆಯನ್ನು ಬೇಟೆ ಆಡಿದೆ.ಬಳಿಕ, ಜಿಂಕೆಯನ್ನು ಹೊತ್ತು ಮರವನ್ನೇರಿ ಹಸಿವು ನೀಗಿಸಿಕೊಂಡಿದೆ. ಬೇಟೆ ದೃಶ್ಯವನ್ನು ಪ್ರವಾಸಿಗರು ಕ್ಯಾಮೆರಾದಲ್ಲಿ ದಾಖಲಿಸಿಕೊಂಡಿದ್ದಾರೆ.
