ಉದಯವಾಹಿನಿ, ಬೆಂಗಳೂರು: ವ್ಯಾಪ್ತಿಯ ಹಲವು ಇಂದಿರಾ ಕ್ಯಾಂಟೀನ್ ಗಳಲ್ಲಿ ಸಿಬ್ಬಂದಿಗೆ ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಊಟ ಪೂರೈಕೆ ಸ್ಥಗಿತವಾಗಿದೆ.ಉಪಹಾರ, ಮಧ್ಯಾಹ್ನ, ರಾತ್ರಿ ಊಟ ಪೂರೈಕೆ ಸ್ಥಗಿತವಾಗಿದ್ದು, ಇದರಿಂದ ಊಟ ಸಿಗದೇ ಜನ ಹಸಿದ ಹೊಟ್ಟೆಯಲ್ಲಿಯೇ ವಾಪಸ್ ಆಗುತ್ತಿದ್ದ ದೃಶ್ಯ ಕ್ಯಾಂಟೀನ್ ಗಳ ಕಂಡುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಿಬ್ಬಂದಿ, ಕ್ಯಾಂಟೀನ್ ಸಿಬ್ಬಂದಿಗೆ ಆರು ತಿಂಗಳ ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರಾಗಿದ್ದು, ಇದರಿಂದ ಊಟ ಕೂಡ ಪೂರೈಕೆಯಾಗುತ್ತಿಲ್ಲ.
ಪಶ್ಚಿಮ ವಲಯದ ಮಲ್ಲೇಶ್ವರಂ ನಂದಿನಿಲೇಔಟ್ ಇಂದಿರಾ ಕಿಚನ್‌ಗಳ ವ್ಯಾಪ್ತಿಯಲ್ಲಿ ಬರುವ ಇಂದಿರಾ ಕ್ಯಾಂಟೀನ್‌ಗಳಿಗೆ ಊಟ ಪೂರೈಕೆಯಾಗುತ್ತಿಲ್ಲ. ನೂರಾರು ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಬಳ ನೀಡಿಲ್ಲ ಎಂದರು.
ಈ ಕಿಚನ್‌ಗಳನ್ನು ಚೆಫ್ ಟಾಕ್ ಕಂಪನಿ ನಿರ್ವಹಣೆ ಮಾಡುತ್ತಿದೆ. ಈ ಕಂಪನಿಗೆ ಬಿಬಿಎಂಪಿ ಹಣ ಪಾವತಿ ಮಾಡಲಿಲ್ಲ. ಪಾಲಿಕೆ, ಚೆಫ್ ಟಾಕ್ ಕಂಪನಿಗೆ ಹಣ ನೀಡದ ಕಾರಣ ಸಿಬ್ಬಂದಿಗೂ ಸಂಬಳ ಸಿಗದೇ ಕಂಗಾಲಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
