ಉದಯವಾಹಿನಿ, ಚಿತ್ರದುರ್ಗ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2024ರ ಅಂಗವಾಗಿ ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಗ್ರಂಥಾಲಯ ವಿಭಾಗದ ವತಿಯಿಂದ “ಅಭಿರುಚಿ ಇದು ಓದುಗರ ವೇದಿಕೆ : ಮೊಬೈಲ್ ಬಿಡಿ-ಪುಸ್ತಕ ಹಿಡಿ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಪ್ತಾಹವನ್ನು ನಿವೃತ್ತ ಡಿ.ವೈ.ಎಸ್.ಪಿ. ಮುರಗನ್ನನವರ್ ಉದ್ಘಾಟಿಸಿದರು.ನಂತರ ಮಾತನಾಡುತ್ತ “ವಿದ್ಯಾರ್ಥಿಗಳೆಂದರೆ ಕೈಯಲ್ಲಿ ಪುಸ್ತಕಗಳನ್ನು ಇಟ್ಟುಕೊಂಡಿರಬೇಕು, ಪುಸ್ತಕಂ ಹಸ್ತ ಲಕ್ಷಣಂ” ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳುತ್ತಾ, ಇತ್ತಿಚಿನ ದಿನಗಳಲ್ಲಿ ಸೈಬರ್ ಕ್ರೆöÊಂ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿನಿಯರು ಪುಸ್ತಕಗಳನ್ನು ಅಧ್ಯಯನ ಮಾಡುತ್ತಾ, ದಿನಪತ್ರಿಕೆಗಳನ್ನು ಓದುತ್ತಾ ಸಮಕಾಲೀನ ಮಾಹಿತಿಗಳನ್ನು ಪಡೆದುಕೊಳ್ಳಬೇಕಿದೆ ಎಂದು ಹೇಳಿದರು.ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ದಾವಣಗೆರೆ ನಗರ ಗ್ರಂಥಾಲಯದ ಉಪನಿದೇರ್ಶಕರಾದ ತಿಪ್ಪೇಸ್ವಾಮಿ ವಿದ್ಯಾರ್ಥಿನಿಯರನು ಕುರಿತು ಉಪನ್ಯಾಸ ನೀಡುತ್ತಾ, ಮೊಬೈಲ್ ನೋಡುತ್ತಾ ಕುಳಿತ ಇಂದಿನ ಯುವ ಪೀಳಿಗೆ ಹಲವು ಗಂಟೆಗಳ ಕಾಲ ತಮ್ಮನ್ನು ತಾವೇ ಮರೆತು ಬಿಡುತ್ತಿದ್ದಾರೆ. ಮೊಬೈಲ್ ನೋಡುತ್ತಾ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಆದರೆ ಪುಸ್ತಕಗಳನ್ನು ಓದುವ ವ್ಯಕ್ತಿಗೆ ಎಂದಿಗೂ ಕೂಡ ಕೀಳರಿಮೆ, ಖಿನ್ನತೆ ಬಾರದು. ಅಧ್ಯಯನಶೀಲ ವ್ಯಕ್ತಿ ಪುಸ್ತಕಗಳನ್ನು ಓದುವ ಮೂಲಕ ತನ್ನ ಬಾಳನ್ನು ಸುಂದರವಾಗಿ ರೂಪಿಸಿಕೊಳ್ಳುತ್ತಾನೆ. ಮುಂದುವರೆದು ಇವರು ಡಿಜಿಟಲ್ ಲೈಬ್ರರಿ ಕುರಿತು- “ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಡಿಜಿಟಲ್ ಲೈಬ್ರರಿಯು ಮುಖ್ಯವಾದ ಪಾತ್ರ ವಹಿಸುತ್ತಿದೆ,
