ಉದಯವಾಹಿನಿ, ಧಾರವಾಡ: ಪ್ರವಾಸದಲ್ಲಿರುವ ಕರ್ನಾಟಕ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಧಾರವಾಡ ಜಿಲ್ಲೆಯಿಂದ ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣಗಳ ಪೈಕಿ ವಿವಿಧ ಪ್ರಕರಣಗಳನ್ನು ವಿಚಾರಣೆ ಮಾಡಿ, 30 ಪ್ರಕರಣಗಳನ್ನು ಇತ್ಯರ್ಥಗೊಳಿಸಿ, ತಿರ್ಪು ನೀಡಿದರು. ನಗರದ ಆಲೂರು ವೆಂಕಟರಾವ್ ಭವನದಲ್ಲಿ ಇಂದಿನ ವಿಚಾರಣೆಗೆ ಗುರುತಿಸಿದ್ದ 57 ಪ್ರಕರಣಗಳನ್ನು ದೂರುದಾರ ಮತ್ತು ಪ್ರತಿವಾದಿಯಾದ ಅಧಿಕಾರಿಗಳ ಸಮ್ಮುಖದಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿಗಳು ವಿಚಾರಣೆ ನಡೆಸಿದರು. ಅವರಿಗೆ ಕರ್ನಾಟಕ ಲೋಕಾಯುಕ್ತ ವಿಚಾರಣೆ ವಿಭಾಗದ ಅಪರ ನಿಬಂಧಕರಾದ ಪಿ.ಶ್ರೀನಿವಾಸ ಅವರ ಪ್ರಕರಣಗಳ ಮಾಹಿತಿ ನೀಡಿದರು.
ಇಂದಿನ ವಿಚಾರಣೆಯಲ್ಲಿ ಇತ್ಯರ್ಥಕ್ಕೆ ಗುರುತಿಸಿದ್ದ 57 ಪ್ರಕರಣಗಳಲ್ಲಿ 30 ಪ್ರಕರಣಗಳನ್ನು ವಿಚಾರಣೆ ಮಾಡಿ, ಸೂಕ್ತ ನ್ಯಾಯ ತೀರ್ಮಾನದೊಂದಿಗೆ ಮುಕ್ತಾಯಗೊಳಿಸಲಾಯಿತು. ಉಳಿದಂತೆ ದೂರುದಾರರು ಗೈರುಹಾಜರು ಉಳಿದಿದ್ದ 8 ಮತ್ತು ಹೆಚ್ಚಿನ ವಿಚಾರಣೆ, ಪೂರಕ ದಾಖಲೆಗಳ ಅಗತ್ಯತೆ ಹಿನ್ನಲೆಯ 19 ಪ್ರಕರಣಗಳು ಸೇರಿ ಒಟ್ಟು 27 ಪ್ರಕರಣಗಳನ್ನು ವಿಚಾರಣೆಗಾಗಿ ಮುಂದಿನ ದಿನಾಂಕಗಳಿಗೆ ಮುಂದೂಡಲಾಯಿತು. ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಚಾಯತ ಸಿಇಓ ಸ್ವರೂಪ ಟಿ.ಕೆ., ಜಿಲ್ಲಾ ಪೆÇಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಜಿಲ್ಲಾ ಲೋಕಾಯುಕ್ತ ಪೆÇಲೀಸ ಅಧೀಕ್ಷಕ ಹನುಮಂತರಾಯ ವೇದಿಕೆಯಲ್ಲಿದ್ದರು.
