ಉದಯವಾಹಿನಿ, ಗಂಗಾವತಿ: ಸಾರಿಗೆ ಇಲಾಖೆ ಬಸ್ಸುಗಳ ನಿಲುಗಡೆಗೆ ಒತ್ತಾಯಿಸಿ, ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿ ಗುರುವಾರ ನಾಗರಿಕ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಪ್ಯಾರಾಮೆಡಿಕಲ್ ಕಾಲೇಜುಗಳಿಗೆ ಗ್ರಾಮದಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಗಂಗಾವತಿ ಸೇರಿ ಕೊಪ್ಪಳ ನಗರಕ್ಕೆ ತೆರಳುತ್ತಾರೆ. ಬೆಳಿಗ್ಗೆ ಸಮಯಕ್ಕೆ ಸರಿಯಾದ ಬಸ್ ಸೌಲಭ್ಯ ಇಲ್ಲದ ಕಾರಣ, ನಿತ್ಯ ಕಾಲೇಜಿನ ತರಗತಿಗಳಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಬೆಂಗಳೂರು ಗ್ರಾಮಾಂತರ ಬೀದರ್ ಚಾಮರಾಜ ನಗರ ಚಿಕ್ಕಮಗಳೂರು ಚಿತ್ರದುರ್ಗ ದಾವಣಗೆರೆ ಧಾರಾವಾಡ ಗದಗ ಉಡುಪಿ ಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ವಡ್ಡರಹಟ್ಟಿ ಗ್ರಾಮ ಬೃಹತ್ ಆಗಿ ಬೆಳೆದು, ಅಪಾರ ಜನಸಂಖ್ಯೆ ಹೊಂದಿದೆ. ಆದರೇ ಗ್ರಾಮದಲ್ಲಿ ಬಸ್ಸುಗಳೇ ನಿಲ್ಲಿಸುತ್ತಿಲ್ಲ. ಯಲಬುರ್ಗಾ, ಕುಷ್ಟಗಿ, ಕುಕನೂರುನಿಂದ ಹಳ್ಳಿ ಮಾರ್ಗವಾಗಿ ಬರುವ ಬಸ್ಸುಗಳು, ಗಂಗಾವತಿಯಿಂದ ಕೊಪ್ಪಳ್ಳಕ್ಕೆ ತೆರಳುವ ಬಸ್ಸುಗಳು ಪ್ರಯಾಣಿಕರಿಂದ ಭರ್ತಿಯಾಗಿ ಬರುತ್ತಿದ್ದು, ಹೆಚ್ಚಿನ ಪ್ರಯಾಣಕರನ್ನು ಹತ್ತಿಸಿಕೊಳ್ಳಲು ಜಾಗದ ಕೊರತೆ ಕಾರಣ ವಡ್ಡರಹಟ್ಟಿಯಲ್ಲಿ ಬಸ್ಸುಗಳೇ ನಿಲ್ಲಿಸುತ್ತಿಲ್ಲ. ಹಾಗಾಗಿ ವಿದ್ಯಾಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಅನಿವಾರ್ಯವಾಗಿ ಹಣನೀಡಿ, ಆಟೊ, ಖಾಸಗಿ ವಾಹನಗಳನ್ನ ಆಶ್ರಯಿಸಬೇಕಾಗಿದೆ. ಈಚೆಗೆ ವೆಂಕಟಗಿರಿ ಗ್ರಾಮದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ವಡ್ಡರಹಟ್ಟಿ ಗ್ರಾಮದಲ್ಲಿ ಬಸ್ ನಿಲುಗಡೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮನವಿ ಸಲ್ಲಿಸಿದರೂ ಕ್ರಮವಾಗಿಲ್ಲ. ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!