ಉದಯವಾಹಿನಿ, ಕೆಆರ್ ಪುರ: ಕನ್ನಡ ರಾಜ್ಯೋತ್ಸವ ಹಾಗೂ ನಟ ಪುನೀತ್ ರಾಜ್‌ಕುಮಾರ್ ಸವಿ ನೆನಪಿನಲ್ಲಿ ಕ್ಷೇತ್ರದ ಕೊತ್ತನೂರಿನ ಸಿದ್ದಾರ್ಥ ಶಾಲೆಯಲ್ಲಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್ ಅವರು ಉದ್ಘಾಟಿಸಿದರು.

ಎಲ್ಲಾ ವಯೋಮಾನದವರು ಇಷ್ಟಪಡುವ ಅಚ್ಚುಮೆಚ್ಚಿನ ನಟ ದಿವಂಗತ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಮೂರು ವರ್ಷ ಆಗಿದೆ,ಅವರ ಅಗಲಿಕೆ ವೈಯಕ್ತಿಕವಾಗಿ ಅತ್ಯಂತ ನೋವು ತರಿಸಿತ್ತು, ನಟನೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿದರು ಎಂದು ಹೇಳಿದರು. ಈ ಆರೋಗ್ಯ ಶಿಬಿರವನ್ನು ಕಳೆದ ಎರಡು ವರ್ಷಗಳಿಂದ ಬಡವರ ಆರೋಗ್ಯ ದೃಷ್ಟಿಯಿಂದ ಕಣ್ಣಿನ ತಪಾಸಣೆ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಕೆಆರ್ ಪುರ ಕ್ಷೇತ್ರದಲ್ಲಿ ಹನ್ನೊಂದು ಕಡೆ ಕಣ್ಣಿನ ತಪಾಸಣೆ ಶಿಬಿರ ಆಯೋಜನೆ ಮಾಡಲಾಗಿದೆ . ಆರೋಗ್ಯದಲ್ಲಿ ಏರುಪೇರು ಆದರೆ ಹತ್ತಿರ ಆಸ್ಪತ್ರೆ ತೆರಳಿ ಚಿಕಿತ್ಸೆ ಪಡೆಯಬಹುದು, ಆದರೆ ಕಣ್ಣಿನ ಚಿಕಿತ್ಸೆ ಪಡೆಯಲು ಹತ್ತಿರದಲ್ಲೇ ಯಾವುದೇ ಆಸ್ಪತ್ರೆಗಳು ಸಿಗುವುದು ಬಹಳ ವಿರಳ ಇದರಿಂದ ಬಡವರ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ,ಪ್ರತಿಯೊಬ್ಬರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ರಾಜ್ಯಸಭಾ ಮಾಜಿ ಸದಸ್ಯ ರಾಜೀವ್ ಗೌಡ ಅವರು ನೂರಾರು ಮಂದಿ ಶಿಬಿರವನ್ನು ಸದುಪಯೋಗ ಪಡಿಸಿಕೊಂಡಿದ್ದು,ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಶಿಬಿರಗಳು ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!