ಉದಯವಾಹಿನಿ , ಮೈಸೂರು: ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳ ನಡುವಿನ ಸಮನ್ವಯ ಮನೋಭಾವ ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಏಕತೆ ಮನೋಭಾವ ರೂಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಮತ್ತು ಸೂಫಿಯರ್ ಸಿಸ್ಟರ್ ರೂಪ ಲೋಪೇಶ್ ಹೇಳಿದರು.
ಅರಸು ಲೈನ್ ಫ್ರಾನ್ಸಿಸ್ಕೆನ್ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮರಿಯನಿಕೇತನ ಶಾಲೆಯ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಶಾಂತಿ, ನ್ಯಾಯ, ನೀತಿ, ಪ್ರೀತಿ ಮತ್ತು ಬ್ರಾತೃತ್ವ ಎಂಬ ಅಂಶದ ಮುಖಾಂತರ ಎಲ್ಲರೂ ಸಹೋದರ ಸಹೋದರಿಯರೆಂಬ ಸಂದೇಶ ಸಾರುತ್ತಿದೆ.
ನಮ್ಮ ದೇಶ ವೈವಿಧ್ಯತೆಯ ಪರಂಪರೆಗಳು ಮತ್ತು ಸಂಸ್ಕೃತಿಗಳಿಂದ ಸಮೃದ್ಧವಾಗಿದೆ ಎಂಬುದನ್ನು ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮ ಮೂಲಕ ಆಚರಣೆಯ ಎಲ್ಲರೂ ಒಂದೇ ಎಂಬ ಸಂದೇಶವನ್ನು ಇನ್ನಷ್ಟು ಸಮೃದ್ಧಿಗೊಳಿಸಿವೆ ಎಂದು ವಿವರಿಸಿದ ಅವರು, ನಾನು ಮೈಸೂರಿನ ಶಾಲಾ ವಾತಾವರಣದಲ್ಲಿ ಜೀವನವನ್ನು ರೂಪಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಹೇಮಚಂದ್ರ, ಅರಸು ಲೈನ್ ಫ್ರಾನ್ಸಿಸ್ಕೆನ್ ಸಂಸ್ಥೆಯ ಮೈಸೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿ ಸಿಸ್ಟರ್ ಲಿಲ್ಲಿ, ಫರ್ನಾಂಡಿಸ್, ಸಿಸ್ಟರ್ ಹ್ಯಾನಿ, ಕರೆನ್ಸ್ ಫಾಡೆಂಟ್, ಡೆಪ್ಯೂಟಿಸಿ ಸೆಕ್ರೆಟ್ರಿ ಸಿಸ್ಟರ್ ಬಿಂದು ಎಲಿಜಬೆತ್, ಆರೋಕ್ಯ ಮೇರಿ ಮರಿಯನಿಕೇತನ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾದ್ಯಾಯರು ಮತ್ತು ಇತರೆ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.
