ಉದಯವಾಹಿನಿ ,ಕೆ.ಆರ್.ಪುರ: ಕಾವೇರಿ ೫ನೇ ಹಂತದಲ್ಲಿ ಕ್ಷೇತ್ರದ ಬಾಬುಸಾಪಾಳ್ಯ ಗ್ರಾಮದ ಕಾವೇರಿ ನೀರಿನ ಸಂಪರ್ಕ ನೀಡುವ ಕಾಮಗಾರಿಗೆ ಶಾಸಕ ಬಿ.ಎ.ಬಸವರಾಜ ಅವರು ಚಾಲನೆ ನೀಡಿದರು.
ಚಾಲನೆ ನೀಡಿ ಮಾತನಾಡಿದ ಶಾಸಕ ಬಿ.ಎ.ಬಸವರಾಜ ಅವರು ಬಾಬುಸಾಪಾಳ್ಯದಲ್ಲಿ ಜನರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದ್ದು,ವಾರಕ್ಕೆ ಎರಡು ದಿನ ಕಾವೇರಿ ನೀರು ಪೂರೈಕೆಯಾಗಲಿದೆ ಎಂದು ತಿಳಿಸಿದರು.
ಬೆಂಗಳೂರಿನ ೨೮ ಕ್ಷೇತ್ರಗಳ ಪೈಕಿ ೨೦೦೮ರಲ್ಲಿ ಬಿಬಿಎಂಪಿಗೆ ಸೇರ್ಪಡೆಗೊಂಡ ೧೧೦ ಹಳ್ಳಿಯ ಕೆ.ಆರ್.ಪುರ ಕ್ಷೇತ್ರದ ಜನರ ಬಹುದಿನದ ಬೇಡಿಕೆ ಈ ಮೂಲಕ ಸಹಕಾರಗೊಳ್ಳುತ್ತಿದೆ, ಕಾವೇರಿ ನೀರನ್ನು ಮಿತವಾಗಿ ಬಳಸುವ ಮೂಲಕ ನೀರಿನ ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು.
ಸಾರ್ವಜನಿಕರು ಜಲಮಂಡಲಿ ವತಿಯಿಂದ ಅನುಮತಿ ಪಡೆದು ,ನೀರಿನ ಸದುಪಯೋಗ ಪಡಿಸಿಕೊಳ್ಳಬೇಕು ಹಂತಹಂತವಾಗಿ ಕ್ಷೇತ್ರದ ಎಲ್ಲಾ ಭಾಗಗಳಿಗೂ ಕಾವೇರಿ ನೀರು ಕಲ್ಪಿಸುವ ಕಾರ್ಯ ಮಾಡುತ್ತೆನೆಂದು ಎಂದು ಭರವಸೆ ನೀಡಿದರು. ಜಲಮಂಡಳಿ ಇಇ ಚನ್ನಬಸವ,ಮಂಡಲ ಅಧ್ಯಕ್ಷ ಮುನೇಗೌಡ, ಆಯೋಜಕ ಡಿವಿಎನ್ ಮಂಜುನಾಥ, ಎಸ್.ಸಿ.ಮೋರ್ಚಾ ಅಧ್ಯಕ್ಷ ಸಂಪತ್ ಕುಮಾರ್, ಮುಖಂಡರಾದ ನರಸಿಂಹಮೂರ್ತಿ, ಕೃಷ್ಣ, ಮುನಿರಾಜು, ಮುನಿಸ್ವಾಮಿ, ಗುರುಕಿರಣ್, ವೆಂಕಟೇಶ್,ಶಾಮಣ್ಣ, ಗಣೇಶ್ ರೆಡ್ಡಿ,ಪುಷ್ಪಾ, ಇದ್ದರು.
