ಉದಯವಾಹಿನಿ, ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್ ಆಗಿದೆ. ಇತ್ತ ನಟ ಹೈಕೋರ್ಟ್‌ನಿಂದ ಪಡೆದಿರುವ ಮಧ್ಯಂತರ ಜಾಮೀನು ಅವಧಿ ಮುಕ್ತಾಯಕ್ಕೆ ಇನ್ನು ೯ ದಿನಗಳು ಬಾಕಿ ಇವೆ.ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಬೆನ್ನು ನೋವಿನ ಹಿನ್ನೆಲೆ ಮಧ್ಯಂತರ ಜಾಮೀನು ಪಡೆದು ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆ ದಾಖಲಾಗಿ ಒಂದು ತಿಂಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾದ ಫೋಟೋ ಒಂದು ವೈರಲ್ ಆಗಿದೆ. ಇದರಲ್ಲಿ ನಟ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿಕೊಂಡಿದ್ದು, ಸುತ್ತಮುತ್ತ ಚಿಕಿತ್ಸಾ ಪರಿಕರಗಳಿವೆ.
ಜಾಮೀನು ಅಂತ್ಯ ಯಾವಾಗ..?
ಹೈಕೋರ್ಟ್ ೬ ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.ಕಳೆದ ಅ. ೩೦ ರಂದು ನಟ ದರ್ಶನ್ ಬಿಡುಗಡೆಯಾಗಿದ್ದರು. ಒಟ್ಟು ೪೨ ದಿನಗಳ ಜಾಮೀನಿನಲ್ಲಿ ಈಗಾಗಲೇ ೩೩ ದಿನಗಳಾಗಿವೆ. ಇನ್ನು ೯ ದಿನಗಳು ಬಾಕಿ ಇದ್ದು, ಆ ಬಳಿಕ ಜೈಲಿಗೆ ಮರಳಬೇಕಿದೆ. ನಟ ದರ್ಶನ್ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ಮುಂದಾಗಿದ್ದಾರೆ. ಆದರೆ, ರಕ್ತದೊತ್ತಡ ವ್ಯತ್ಯಾಸವಾಗುತ್ತಿರುವ ಹಿನ್ನೆಲೆಯಲ್ಲಿ ನಿಗಾ ಮುಂದುವರೆಸಿದ್ದಾರೆ. ಇನ್ನು ಕೆಲ ದಿನಗಳಲ್ಲಿಯೇ ಶಸ್ತ್ರಚಿಕಿತ್ಸೆ ಮಾಡುವ ಸಾಧ್ಯತೆಗಳಿವೆ. ಕಳೆದ ನಾಲ್ಕು ವಾರಗಳಿಂದ ಪಿಸಿಯೋಥೆರಪಿ ಮಾಡಲಾಗುತ್ತಿದೆ.
