ಉದಯವಾಹಿನಿ, ಬೆಂಗಳೂರು: ನಶೆ ಮುಕ್ತ ಬೆಂಗಳೂರು ನಗರವನ್ನಾಗಿಸುವ ನಿಟ್ಟಿನಲ್ಲಿ ನಗರ ಪೊಲೀಸರು ಎರಡು ದಿನಗಳ ಕಾಲ ವಿಶೇಷ ಕಾರ್ಯಾಚರಣೆ ನಡೆಸಿ ಕಾನೂನು ಉಲ್ಲಂಘನೆ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡು 35 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ನಗರದಲ್ಲಿ ಮುಂಬರುವ 2025ನೇ ಸಾಲಿನ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಮತ್ತು ಕಾನೂನು ಮತ್ತು ಸುವ್ಯವವಸ್ಥೆಗೆ ದಕ್ಕೆಯಾಗದಂತೆ ಮುಂಜಾಗ್ರತಾ ಕ್ರಮವಹಿಸುವ ಸದುದ್ದೇಶದಿಂದ ಹಾಗೂ ನಶೆಮುಕ್ತ ಬೆಂಗಳೂರು ನಗರವನ್ನಾಗಿಸುವ ನಿಟ್ಟಿನಲ್ಲಿ ನ.29 ಮತ್ತ 30ರಂದು ಪೊಲೀಸರು ವಿಶೇಷ ಕಾರ್ಯಾಚರಣೆ ಹಮಿಕೊಂಡಿದ್ದರು. ನಗರದ ಎಲ್ಲಾ ವಿಭಾಗಗಳ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಈ ಹಿಂದೆ ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಪರಿಶೀಲನೆ ಸೇರಿದಂತೆ, ಪಬ್, ವೈನ್ಸ್ಟೋರ್ರಸ, ಬಾರ್ ರೆಸ್ಟೋರೆಂಟ್ಗಳು, ಸ್ಥಳೀಯ ಡಾಬ, ಹೋಟೆಲ್ ಮತ್ತು ಲಾಡ್‌್ಜಗಳಿಗೆ ಭೇಟಿ ನೀಡಿ, ಅನುಮಾನಾಸ್ಪದ ವ್ಯಕ್ತಿಗಳು, ರೌಡಿಶೀಟರ್ಗಳು ಹಾಗೂ ಹಳೇ ಆರೋಪಿಗಳನ್ನು ಪರಿಶೀಲಿಸುವ ಕ್ರಮ ಕೈಗೊಂಡು, ಕಾನೂನು ಉಲ್ಲಂಘನೆ ಮಾಡಿದ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ಳಲಾಗಿದೆ.
